ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಕಾರ್ಯದೊತ್ತಡದಿಂದಾಗಿ ಕೋಪ-ತಾಪಗಳು ಕಂಡುಬಂದೀತು. ಆರ್ಥಿಕವಾಗಿ ಹಣ ಹೊಂದಿಸುವ ಚಿಂತೆ ಕಾಡಲಿದೆ. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಿ. ಮಕ್ಕಳಿಂದ ಸಂತಸ ಸಿಗಲಿದೆ.ವೃಷಭ: ಹಣಕಾಸಿನ ವಿಚಾರವಾಗಿ ಆಪ್ತರೊಂದಿಗೆ ಭಿನ್ನಾಭಿಪ್ರಾಯ ಕಂಡುಬಂದೀತು. ತಾಳ್ಮೆಯಿಂದ ವ್ಯವಹರಿಸಿ. ವೃತ್ತಿರಂಗದಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.ಮಿಥುನ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದ್ದು, ಎಲ್ಲವೂ ಮನದಿಚ್ಛೆಯಂತೇ ನಡೆಯಲಿದೆ. ಸಾಂಸಾರಿಕವಾಗಿ ಸಂತೋಷ, ನೆಮ್ಮದಿಯ ದಿನಗಳಿವು. ಪ್ರೀತಿ