ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಪ್ರಗತಿ ಕಂಡುಬರುವುದು. ನಿಮ್ಮ ಕರ್ತವ್ಯ ನಿಷ್ಠೆ ಬಗ್ಗೆ ಎದುರಾಳಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಲಿದೆ. ಆದರೆ ವೈಯಕ್ತಿಕ ಜೀವನದಲ್ಲಿ ಏರುಪೇರು ಕಂಡುಬಂದೀತು. ತಾಳ್ಮೆಯಿರಲಿ.ವೃಷಭ: ಅಪರಿಚಿತರನ್ನು ನಂಬಿ ಹಣಕಾಸಿನ ವ್ಯವಹಾರ ಮಾಡಬೇಡಿ. ಗುರುಹಿರಿಯರ ವಿಶ್ವಾಸಕ್ಕೆ ಪಾತ್ರರಾಗಲಿದ್ದೀರಿ. ಮನೆಯ ವಾತಾವರಣ ಕೊಂಚ ಪ್ರಕ್ಷುಬ್ಧವಾಗಿರುವಂತೆ ಕಂಡುಬಂದೀತು. ತಾಳ್ಮೆ, ಸಂಯಮದಿಂದ ನಿಭಾಯಿಸಿ.ಮಿಥುನ: ವೈವಾಹಿಕ ಸಂಬಂಧಗಳಲ್ಲಿ ಬಿರುಕು ಉಂಟಾಗದಂತೆ ಎಚ್ಚರಿಕೆ ವಹಿಸಿ. ಹಿರಿಯರಿಗೆ ಧಾರ್ಮಿಕ