ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಅನಿವಾರ್ಯ ಸಂದರ್ಭದಲ್ಲಿ ದೂರ ಪ್ರಯಾಣ ಮಾಡಬೇಕಾಗುತ್ತದೆ. ಆಪ್ತರನ್ನು ಭೇಟಿಯಾಗುವ ಖುಷಿಯಿದ್ದರೋ ಏನೋ ಅರಿಯದ ಆತಂಕ ಮನಸ್ಸಿಗೆ ಕಾಡಲಿದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ಯಾವುದೇ ಕೆಲಸ ಆರಂಭಿಸಬೇಕಾದರೂ ನಿಮ್ಮ ಕೈಲಾಗದೇನೋ ಎಂಬ ಅನುಮಾನ ಕಾಡೀತು. ಸಂಗಾತಿಯ ಸಹಕಾರ ಪಡೆಯಲಿದ್ದೀರಿ. ಆರ್ಥಿಕವಾಗಿ ಒಳ್ಳೆಯ ವಿಚಾರಕ್ಕೆ ಖರ್ಚು ವೆಚ್ಚ ಮಾಡಲಿದ್ದೀರಿ.ಮಿಥುನ: ನೂತನ ಸಂಬಂಧಗಳು ಬೆಸೆಯಲಿದ್ದು, ಮನಸ್ಸಿಗೆ ಒಂದು ರೀತಿಯ ಸಂತೋಷ ಸಿಗಲಿದೆ.