ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಆಗಬೇಕಾದ ಕೆಲಸಗಳ ಬಗ್ಗೆ ಮೀನಮೇಷ ಎಣಿಸುತ್ತಾ ಕೂತರೆ ಸಾಲದು. ಕಾರ್ಯೋನ್ಮುಖರಾಗುವತ್ತ ಗಮನ ಕೊಡಿ. ದೇಹಾರೋಗ್ಯದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆರ್ಥಿಕವಾಗಿ ಅನಿರೀಕ್ಷಿತ ಧನಾಗಮನವಾಗಲಿದೆ.ವೃಷಭ: ನಿಮ್ಮದಲ್ಲದ ವಸ್ತುವಿನ ಬಗ್ಗೆ ಅತಿಯಾದ ಮೋಹ ಬೇಡ. ಹಳೆಯ ಸಂಬಂದಗಳು ಮತ್ತೆ ಚಿಗುರಿಕೊಳ್ಳಲಿವೆ. ನೀರು-ಬೆಂಕಿಯೊಂದಿಗೆ ಎಚ್ಚರಿಕೆಯಿಂದಿರಿ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ದೇವತಾ ಪ್ರಾರ್ಥನೆ ಮಾಡಿ.ಮಿಥುನ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಸೂಕ್ತ ವೈವಾಹಿಕ