ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಲೂ ಆಗದೆ ಸಂದಿಗ್ಧ ಪರಿಸ್ಥಿತಿ ಎದುರಿಸುವಿರಿ. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳು ಕಂಡುಬರಲಿದೆ. ಸಂಗಾತಿಯಿಂದ ಸಾಂತ್ವನ ಸಿಗಲಿದೆ. ತಾಳ್ಮೆ ಅಗತ್ಯ.ವೃಷಭ: ಹಳೆಯ ದೇಹಾರೋಗ್ಯದ ಸಮಸ್ಯೆಗಳು ಮತ್ತೆ ಕಂಡುಬಂದೀತು. ಹಿರಿಯರೊಂದಿಗೆ ವಿನಯದಿಂದ ವರ್ತಿಸಿ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಲಾಭವಾದೀತು. ಸರಕಾರಿ ಲೆಕ್ಕಪತ್ರಗಳನ್ನು ಜೋಪಾನ ಮಾಡಿ.ಮಿಥುನ: ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡದಿಂದ ದೇಹಾಯಾಸವಾದೀತು. ಮಾನಸಿಕವಾಗಿ ಒತ್ತಡ ತರುವ ವಿಚಾರಗಳನ್ನು ಕೇಳಲಿದ್ದೀರಿ.