ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಬಯಸಿದ ರೀತಿಯಲ್ಲಿ ಕಾರ್ಯಗಳು ಸಾಗದೇ ಅಸಮಾಧಾನವಾದೀತು. ಕೌಟುಂಬಿಕವಾಗಿ ತಾಳ್ಮೆ, ಸಂಯಮ ಅಗತ್ಯ. ಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.ವೃಷಭ: ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಪರವೂರಿಗೆ ಸಂಚರಿಸುವ ಸಂದರ್ಭ ಎದುರಾದೀತು. ಗೃಹಿಣಿಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ. ಹಿರಿಯರ ದೇಹಾರೋಗ್ಯದಲ್ಲಿ ಸುಧಾರಣೆಯಾಗಲಿದೆ.ಮಿಥುನ: ವೈಯಕ್ತಿಕ ಕಷ್ಟಗಳ ಪರಿಹಾರಕ್ಕಾಗಿ ಆಪ್ತರ ಮೊರೆ ಹೋಗಲಿದ್ದೀರಿ. ಕೌಟುಂಬಿಕವಾಗಿ ಪರಸ್ಪರ ಸಹಕಾರ ನೆಮ್ಮದಿ ಕಂಡುಬರಲಿದೆ.