ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಗೃಹೋಪಕರಣಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ಸಂಗಾತಿಯ ಕೆಲವೊಂದು ಸಲಹೆಗಳನ್ನು ಸ್ವೀಕರಿಸಬೇಕಾಗುತ್ತದೆ. ವೃತ್ತಿರಂಗದಲ್ಲಿ ಬದಲಾವಣೆಗೆ ಮನಸ್ಸು ಮಾಡಲಿದ್ದೀರಿ. ತಾಳ್ಮೆ, ಸಂಯಮ ಅಗತ್ಯ.ವೃಷಭ: ಶುಭ ಕೆಲಸಗಳು, ಶುಭ ಕಾರ್ಯಗಳನ್ನು ಮಾಡಲು ಕೆಲವು ದಿನ ಕಾಯುವುದು ಉತ್ತಮ. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ. ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸಲಿದ್ದೀರಿ.ಮಿಥುನ: ಬೇರೆಯವರ ವಿಚಾರದಲ್ಲಿ ಅನಗತ್ಯ ಮೂಗು ತೂರಿಸಲು ಹೋಗಬೇಡಿ. ಪ್ರೀತಿ