ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ ವ್ಯವಹಾರದಲ್ಲಿ ಅಡಚಣೆಗಳು ಎದುರಾದರೂ ಕುಟುಂಬದವರ ಸಹಕಾರವಿರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.ವೃಷಭ: ವ್ಯಾಪಾರೀ ವರ್ಗದವರಿಗೆ ಉನ್ನತ ಸ್ಥಾನ ಮಾನದ ಯೋಗ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ಬಂಧು ಮಿತ್ರರ ಸಹಕಾರ ಕಂಡುಬರಲಿದೆ. ದಿನದಂತ್ಯಕ್ಕೆ ಸಂತೋಷದ ಸುದ್ದಿ ಸಿಗಲಿದೆ.ಮಿಥುನ: ವೃತ್ತಿರಂಗದಲ್ಲಿ ನಿಮ್ಮ ಭವಿಷ್ಯದ ಬಗ್ಗೆ ಚಿಂತೆಯಾದೀತು. ಕಷ್ಟದ ಸಮಯದಲ್ಲಿ ಮಿತ್ರರ