ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ ಕ್ಷೇತ್ರದಲ್ಲಿ ಅಥವಾ ಕೌಟುಂಬಿಕವಾಗಿ ತಾಳ್ಮೆಯೇ ನಿಮ್ಮ ಅಸ್ತ್ರವಾಗಬೇಕು. ಸತತವಾಗಿ ಪಟ್ಟ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು.ವೃಷಭ: ಹಿಂದೆ ನಿಮ್ಮ ಕಷ್ಟಗಳಿಗೆ ನೆರವಾದವರಿಗೆ ಪ್ರತ್ಯುಪಕಾರ ಮಾಡುವ ಅವಕಾಶ ನಿಮ್ಮದಾಗಲಿದೆ. ಹಿರಿಯರಿಗೆ ದೇಹಾರೋಗ್ಯದಲ್ಲಿ ಸಣ್ಣ ಪುಟ್ಟ ತೊಂದರೆ ಕಾಣಿಸೀತು. ಸರಕಾರಿ ಕೆಲಸಗಳಿಗಾಗಿ ಓಡಾಟ ನಡೆಸಲಿದ್ದೀರಿ.ಮಿಥುನ: ವೈಯಕ್ತಿಕ ಜೀವನದಲ್ಲಿ ಎಷ್ಟೇ ಕಷ್ಟಗಳಿದ್ದರೂ ಔದ್ಯೋಗಿಕ ಜೀವನದಲ್ಲಿ