ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಬೆಟ್ಟದಂತೆ ಬಂದ ಕಷ್ಟಗಳು ಮಂಜಿನಂತೆ ಪರಿಹಾರವಾಗಲಿದೆ. ಸಂಗಾತಿಯ ಕೆಲವೊಂದು ಅಭಿಪ್ರಾಯಗಳಿಗೆ ಅಸಮಾಧಾನವಾದೀತು. ಆದರೂ ಕೌಟುಂಬಿಕ ಕ್ಷೇಮಕ್ಕಾಗಿ ಕೆಲವೊಂದು ತ್ಯಾಗ ಮಾಡಲಿದ್ದೀರಿ.ವೃಷಭ: ಹೊಸ ಜಾಗಗಳಿಗೆ ಭೇಟಿ ಕೊಡುವ ಯೋಗ ನಿಮ್ಮದಾಗಲಿದೆ. ವಿಶೇಷ ಭೋಜನ ಮಾಡುವ ಯೋಗವಿದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಖರ್ಚು ವೆಚ್ಚಗಳಿಗೆ ಕಡಿವಾಣವಿರಲಿ.ಮಿಥುನ: ಆಪ್ತೇಷ್ಟರೊಂದಿಗೆ ಕಿರು ಪ್ರವಾಸ ಮಾಡುವ ಯೋಗವಿದೆ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ