ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಅಧ್ಯಯನ ನಿರತರಿಗೆ ಅನುಕೂಲಕರ ವಾತಾವರಣವಿರಲಿದೆ. ಯೋಗ್ಯ ವಯಸ್ಕರಿಗೆ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ಬಂಧು ಮಿತ್ರರೊಂದಿಗೆ ಕಾಲ ಕಳೆಯುವ ಅವಕಾಶ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ಅತಿಯಾಗಿ ವಿನಯ ತೋರುವವರೊಂದಿಗೆ ಎಚ್ಚರಿಕೆಯಿಂದಿರಿ. ಕೋರ್ಟು ಕಚೇರಿ ಕಲಾಪಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಕೌಟುಂಬಿಕವಾಗಿ ನಿಮ್ಮ ಕೆಲಸಗಳಿಗೆ ಮನೆಯವರ ಸಾಥ್ ಸಿಗಲಿದೆ. ಅನಗತ್ಯ ಚಿಂತೆ ಬೇಡ.ಮಿಥುನ: ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಸಿಗಬೇಕಾದರೆ ಅತಿಯಾದ ಪರಿಶ್ರಮ ಅಗತ್ಯ.