ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮಗೆ ವಂಚನೆ ಮಾಡಿದವರಿಗೆ ತಕ್ಕ ಏಟು ಕೊಡುವ ಪ್ರತೀಕಾರದ ಮನೋಭಾವ ನಿಮ್ಮಲ್ಲಿ ಬೆಳೆಯಲಿದೆ. ಸಂಗಾತಿಯ ಹಿತವಚನಗಳಿಗೆ ಕಿವಿಗೊಡುವುದು ಉತ್ತಮ. ವಿದ್ಯಾರ್ಥಿಗಳಿಗೆ ಮುನ್ನಡೆ ಕಂಡುಬರಲಿದೆ.ವೃಷಭ: ಉದ್ಯೋಗಸ್ಥ ಮಹಿಳೆಯರಿಗೆ ಮುಂಬಡ್ತಿಯ ಕನಸಿಗೆ ಅಡ್ಡಿ ಆತಂಕಗಳು ಎದುರಾಗಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ವಿಶೇಷ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.ಮಿಥುನ: ಕಾರ್ಯನಿಮಿತ್ತ ಓಡಾಟ ನಡೆಸಬೇಕಾಗುತ್ತದೆ. ಅನ್ಯರ ವಿಚಾರಗಳಿಗೆ ಅನಗತ್ಯವಾಗಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ.