ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ. ಬಹಳ ದಿನಗಳ ನಂತರ ಆತ್ಮೀಯರನ್ನು ಭೇಟಿ ಮಾಡುವ ಸಂತೋಷ ನಿಮ್ಮದಾಗುವುದು. ಆರ್ಥಿಕವಾಗಿ ಹಣಕಾಸಿನ ಖರ್ಚು ವೆಚ್ಚಗಳಿಗೆ ಸಿದ್ಧರಾಗಿ. ಅನಗತ್ಯ ಚಿಂತೆ ಬೇಡ.ವೃಷಭ: ನಿಮಗನಿಸಿದ್ದನ್ನು ಸ್ಪಷ್ಟವಾಗಿ ಹೇಳಲು ತಡವರಿಸುವ ಪರಿಸ್ಥಿತಿಯಾದೀತು. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ. ಕಾರ್ಯರಂಗದಲ್ಲಿ ನಿಮಗೆ ಪೈಪೋಟಿ ಎದುರಾದೀತು. ಕುಟುಂಬದವರ ಪ್ರೋತ್ಸಾಹ ಕಂಡುಬರಲಿದೆ.ಮಿಥುನ: ನೂತನ ಮಿತ್ರರ ಸಮಾಗಮವಾಗಲಿದೆ. ಆಹಾರೋದ್ಯಮಿಗಳಿಗೆ ಉನ್ನತಿಯ ಯೋಗ.