ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ, ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಂಡುಬರಲಿದೆ. ಆದರೆ ಸಂಗಾತಿಯ ಹಠವಾದೀ ಮನೋಭಾವ ನಿಮ್ಮ ಅಸಹನೆ ಹೆಚ್ಚಿಸಲಿದೆ. ಹಿಂದೆ ಮಾಡಿದ್ದ ತೀರ್ಮಾನವನ್ನು ಗಟ್ಟಿ ಮಾಡಲಿದ್ದೀರಿ.ವೃಷಭ: ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೇ ನಿರಾಸೆಯಾದೀತು. ಭೂಮ್ಯಾದಿ ವ್ಯವಹಾರಗಳನ್ನು ಮಾಡುವಾಗ ಹಿರಿಯರ ಸಲಹೆ ಪಡೆಯುವುದು ಉತ್ತಮ. ಹಿರಿಯರಿಗೆ ಸಾಮಾಜಿಕ ಕಾರ್ಯಗಳಿಂದ ನೆಮ್ಮದಿ ಸಿಗುವುದು.ಮಿಥುನ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ