ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸಹೋದರ ಸಮಾನರಿಗೆ ಸಹಾಯ ಮಾಡಲಿದ್ದೀರಿ. ಉದ್ಯೋಗ, ವ್ಯವಹಾರದಲ್ಲಿ ನಿಮ್ಮ ನಿಷ್ಠೆಗೆ ತಕ್ಕ ಫಲ ಸಿಗಲಿದೆ. ದಂಪತಿಗಳಲ್ಲಿ ಪರಸ್ಪರ ಹೊಂದಾಣಿಕೆಯ ಕೊರತೆ ಕಂಡುಬಂದೀತು. ದೇವತಾ ಪ್ರಾರ್ಥನೆ ಮಾಡಿದರೆ ಉತ್ತಮ.ವೃಷಭ: ಮಾತಿನಲ್ಲಿ ಎಷ್ಟೇ ನಯವಾಗಿದ್ದರೂ ನಿಮ್ಮ ಕೆಲವೊಂದು ನಡೆಗಳು ಆಪ್ತರ ಅಸಮಾಧಾನಕ್ಕೆ ಗುರಿಯಾದೀತು. ಅನಿರೀಕ್ಷಿತವಾಗಿ ಖರ್ಚು ವೆಚ್ಚವಾಗುವ ಸಾಧ್ಯತೆ. ಕಾರ್ಯನಿಮಿತ್ತ ಪರವೂರಿಗೆ ಸಂಚರಿಸಲಿದ್ದೀರಿ.ಮಿಥುನ: ಉದ್ಯೋಗ, ವ್ಯವಹಾರದಲ್ಲಿ ಪಾರದರ್ಶಕತೆಯಿರಲಿ. ಸಾಮಾಜಿಕವಾಗಿ ಗೌರವ ಪ್ರಾಪ್ತಿಯಾಗಲಿದೆ.