ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಘರ್ಷಣೆಗೆ ಅವಕಾಶ ನೀಡದೇ ನಾಜೂಕಾಗಿ ಕೆಲಸ ನಿಭಾಯಿಸಬೇಕಾಗುತ್ತದೆ. ಸಾಂಸಾರಿಕವಾಗಿ ತಾಳ್ಮೆಯಿರಲಿ. ಹಣಕಾಸಿನ ವಿಚಾರದಲ್ಲಿ ಅಡೆತಡೆಗಳು ಬಂದೀತು. ಭೂಮ್ಯಾದಿ ವ್ಯವಹಾರಗಳಲ್ಲಿ ಅನುಕೂಲವಾದೀತು.ವೃಷಭ: ಉದ್ಯೋಗ, ವ್ಯವಹಾರದಲ್ಲಿ ಪ್ರಗತಿದಾಯಕ ಬದಲಾವಣೆ. ಸಹವಾಸ ದೋಷದಿಂದ ಕೆಲವೊಂದು ದುಶ್ಚಟಗಳು ಬಂದೀತು. ಹಿರಿಯರ ಸಲಹೆ ಪಡೆಯುವುದು ಉತ್ತಮ. ಕಾರ್ಯನಿಮಿತ್ತ ಪರರನ್ನು ಅವಲಂಬಿಸಬೇಕಾಗುತ್ತದೆ.ಮಿಥುನ: ಅನ್ಯರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಲಿದ್ದೀರಿ. ಹಣಕಾಸಿನ ಹರಿವಿಗೆ ತೊಂದರೆಯಾಗದು.