ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಪೈಪೋಟಿ ಎದುರಾದೀತು. ಸಾಂಸಾರಿಕವಾಗಿ ವೈಮನಸ್ಯಗಳನ್ನು ಸರಿಪಡಿಸಿಕೊಳ್ಳಲಿದ್ದೀರಿ. ದೂರದ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರುವುದು. ತಾಳ್ಮೆಯಿರಲಿ.ವೃಷಭ: ಕೆಲಸ ಕಾರ್ಯಗಳು ವಿಘ್ನ ತೋರಿಬಂದರೂ ನಿಮ್ಮ ಯಶಸ್ಸು ಯಾರಿಂದಲೂ ತಡೆಯಲಾಗದು. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ವ್ಯಾಪಾರಿಗಳಿಗೆ ಹಿತಶತ್ರುಗಳ ಕಾಟದಿಂದ ಮುಕ್ತಿ ಸಿಗಲಿದೆ. ಚಿಂತೆ ಬೇಡ.ಮಿಥುನ: ವೃತ್ತಿಸಂಬಂಧವಾದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಕ್ರಿಯಾತ್ಮಕ ದಾರಿಗಳನ್ನು ಹುಡುಕಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಒದಗಿಬರಲಿದೆ.