ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಗುರು ಹಿರಿಯರ ಆಶೀರ್ವಾದ ಕೈಗೆತ್ತಿಕೊಂಡ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದೀರಿ.ದೀರ್ಘ ಪ್ರಯಾಣದ ಸಂಭವ. ಮಹಿಳೆಯರಿಗೆ ಬಿಡುವಿನ ದಿನದ ಖುಷಿ.ವೃಷಭ: ಸಹೋದ್ಯೋಗಿಗಳೊಂದಿಗೆ ಕಿರು ಪ್ರವಾಸ ಮಾಡಲಿದ್ದೀರಿ. ದಾಂಪತ್ಯದಲ್ಲಿ ತೃಪ್ತಿಕರ ವಾತಾವರಣವಿರಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮ ಹೆಚ್ಚಾಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.ಮಿಥುನ: ಕೌಟುಂಬಿಕವಾಗಿ ಸುಂದರ ಕ್ಷಣ ಕಳೆಯುವ ಯೋಗ. ಇಷ್ಟಮಿತ್ರರೊಂದಿಗೆ ಇಷ್ಟ ಭೋಜನ ಮಾಡುವ ಯೋಗ.