ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮ ಹಠಮಾರೀ ಮನೋಭಾವದಿಂದ ನಷ್ಟವೇ ಹೆಚ್ಚು. ಪರರ ನಿಂದನೆಯಲ್ಲಿ ಕಾಲ ಹರಣ ಮಾಡಬೇಡಿ. ಹೊಸದಾಗಿ ಮದುವೆಯಾಗಿದ್ದವರಿಗೆ ಸುಂದರ ಕ್ಷಣ ಕಳೆಯುವ ಯೋಗ. ದೇವತಾ ಪ್ರಾರ್ಥನೆ ಮಾಡಿ.ವೃಷಭ: ಕಾರ್ಯಕ್ಷೇತ್ರದಲ್ಲಿ ನಿಮ್ಮ ಎದುರಾಳಿಗಳಿಂದ ಅಡೆತಡೆಗಳು ಕಂಡುಬಂದೀತು. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ. ಸಹೋದರಾದಿ ಸಂಬಂಧಿಗಳೊಂದಿಗೆ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಲಿದ್ಧೀರಿ.ಮಿಥುನ: ಆಸ್ತಿ ಪರಭಾರೆ ವಿಚಾರಗಳಲ್ಲಿ ಹಿರಿಯರ ಸಲಹೆ ಪಡೆಯುವುದು ಉತ್ತಮ. ಸರಕಾರೀ ನೌಕರರಿಗೆ ಮುಂಬಡ್ತಿ ಯೋಗ.