ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸಹೋದರ ಸಮಾನರಿಗೆ ಸಹಾಯ ಮಾಡಲಿದ್ದೀರಿ. ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಆಗಮನ ಸಾಧ್ಯತೆ. ಪರವೂರಿನ ವ್ಯವಹಾರದಿಂದ ನಷ್ಟದ ಭೀತಿ. ಗೃಹಿಣಿಯರಿಗೆ ಬಿಡುವಿಲ್ಲದ ಕೆಲಸದೊತ್ತಡ.ವೃಷಭ: ಮಕ್ಕಳಿಂದ ನಿಮ್ಮ ಸಂತೋಷ ಹೆಚ್ಚಲಿದೆ. ಆರ್ಥಿಕ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ಹೊಸ ಮಿತ್ರರಿಂದ ಕಾರ್ಯಾನುಕೂಲವಾಗಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ.ಮಿಥುನ: ಉದ್ಯೋಗ, ವ್ಯವಹಾರದಲ್ಲಿ ಪಾರದರ್ಶಕತೆಗೆ ಅವಕಾಶ ನೀಡಿ. ನೂತನವಾಗಿ ಕೆಲಸಕ್ಕೆ ಸೇರಿಕೊಂಡಿದ್ದರೆ ಸವಾಲುಗಳು ಎದುರಾದೀತು.