ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸಾಂಸಾರಿಕವಾಗಿ ನಿಮ್ಮ ತಾಳ್ಮೆಯೇ ನಿಮಗೆ ಅಸ್ತ್ರವಾಗಲಿದೆ. ಬೇರೆಯವರು ಹೇಳುವ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ವ್ಯವಹಾರದಲ್ಲಿ ಸುಧಾರಣೆ ಕಂಡುಬರಲಿದೆ. ಮಕ್ಕಳಿಂದ ಸಂತೋಷ ಸಿಗುವುದು.ವೃಷಭ: ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲಗಳು ಕಾಡಲಿವೆ. ಸಂಗಾತಿಯ ಸಹಕಾರ ಸಿಗಲಿದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ವ್ಯಾಪಾರಿಗಳಿಗೆ ಹಣಕಾಸಿನ ಹರಿವಿಗೆ ತೊಂದರೆಯಾಗದು.ಮಿಥುನ: ಯಾವುದೇ ವಸ್ತು ಅಥವಾ ವ್ಯಕ್ತಿಯ ಮೇಲೆ ಅತೀವ ನಿರೀಕ್ಷೆಯಿಟ್ಟುಕೊಂಡಿದ್ದಲ್ಲಿ ನಿರಾಸೆಯಾಗುವ ಸಾಧ್ಯತೆ. ಆಸ್ತಿ ವಿಚಾರಗಳಲ್ಲಿ