ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸಂತೋಷದಾಯಕವಾದ ದಿನವಾಗಿರಲಿದೆ. ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ. ಗುರುಹಿರಿಯರ ಆಶೀರ್ವಾದ ಸಿಗುವುದು. ಹಣಕಾಸಿನ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗೊತ್ತಿ ಕೆಲಸ ಮಾಡಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಒತ್ತಡ ಕಂಡುಬಂದೀತು. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆಯಿರುವುದು. ತಾಳ್ಮೆಯಿರಲಿ.ಮಿಥುನ: ನಿಮ್ಮ ಮಾತೇ ನಿಮಗೆ ಅಸ್ತ್ರವಾಗಲಿದೆ. ವ್ಯವಹಾರದಲ್ಲಿ ಮುನ್ನಡೆಯ ಯೋಗ. ಹಿತಶತ್ರುಗಳ ಕಾಟದಿಂದ ಮುಕ್ತಿ