ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ರಾಜಕೀಯ ವರ್ಗದವರಿಗೆ ಮುನ್ನಡೆಯ ಯೋಗ. ವಿದ್ಯಾರ್ಥಿ ವೃಂದದವರಿಗೆ ಹೊಸ ಸವಾಲುಗಳು ಎದುರಾದೀತು. ಕಾರ್ಯಕ್ಷೇತ್ರದಲ್ಲಿ ಅಧಿಕ ಓಡಾಟದಿಂದ ದೇಹಾಯಾಸವಾದೀತು. ಕಿರು ಸಂಚಾರ ಮಾಡಲಿದ್ದೀರಿ.ವೃಷಭ: ಸಹೋದರಾದಿ ವರ್ಗದವರೊಂದಿಗೆ ಅನಗತ್ಯ ಚರ್ಚೆಗೆ ಅವಕಾಶ ಮಾಡಿಕೊಡಬೇಡಿ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ. ಸರಕಾರೀ ಉದ್ಯೋಗಿಗಳಿಗೆ ಕಾರ್ಯದೊತ್ತಡ ಕಂಡುಬರಲಿದೆ.ಮಿಥುನ: ನಿಮ್ಮ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಿದ್ದೀರಿ. ಕಾರ್ಯರಂಗದಲ್ಲಿ ಯಶಸ್ಸು ಸಿಗುವುದು. ವಾಹನ, ಭೂಮಿ