ಬೆಂಗಳೂರು: ನಿಮ್ಮ ಇಂದಿನ ಭವಿಷ್ಯ, ರಾಶಿ ಫಲ ಹೇಗಿದೆ ಎಂದು ತಿಳಿದುಕೊಳ್ಳಿ. ಮೇಷ:- ಶಿಕ್ಷಕರಿಗೆ ವಿಶ್ರಾಂತಿ ದೊರೆಯುತ್ತದೆ. ವ್ಯಾಪಾರಸ್ಥರು ಮತ್ತು ವೃತ್ತಿಪರರು ನಿರೀಕ್ಷಿಸಿದಷ್ಟು ಪ್ರಗತಿಯನ್ನು ಹೊಂದಿರುವುದಿಲ್ಲ. ಸಾಹಸಮಯ ಪ್ರಯತ್ನಗಳನ್ನು ಬಿಟ್ಟುಬಿಡಿ. ನಿಮ್ಮ ಶ್ರೇಷ್ಠತೆಯ ಬಗ್ಗೆ ಹೊಟ್ಟೆಕಿಚ್ಚುಪಡುವವರು ಹೆಚ್ಚಾಗುತ್ತಿದ್ದಾರೆ ಎಂಬುದನ್ನು ಗಮನಿಸಿ. ನಿಮ್ಮ ಮೌನ ಅವರಿಗೆ ಪಾಠ ಕಲಿಸುತ್ತದೆ. ದೂರ ಪ್ರಯಾಣ ಮತ್ತು ತೀರ್ಥಯಾತ್ರೆಗಳು ಅನುಕೂಲಕರವಾಗಿವೆ. ವೃಷಭ :- ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುವಿರಿ. ಇತರರಿಗೆ ವಾಹನಗಳನ್ನು ನೀಡುವ ವಿಷಯದಲ್ಲಿ ಜಾಗರೂಕರಾಗಿರಿ.