ಬೆಂಗಳೂರು: ನಾವು ಹಿಂದೆ ಮಾಡಿದ ಪಾಪದ ಫಲಗಳನ್ನು ಆ ಭಗವಂತ ಲೆಕ್ಕ ಇಟ್ಟುಕೊಂಡು, ಅದಕ್ಕೆ ಕಾಲ ಕಾಲಕ್ಕೆ ತಕ್ಕ ಫಲ ಅನುಭವಿಸುವಂತೆ ಮಾಡುತ್ತಾನೆ ಎಂಬ ನಂಬಿಕೆ ನಮ್ಮದು.ಹಾಗೆಯೇ ಕೆಲವರು ನಮ್ಮ ಮಕ್ಕಳೇ ನಮ್ಮನ್ನು ಹಿಂಸೆ ಮಾಡುತ್ತಾರೆ, ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡುತ್ತಾರೆ ಎಂದು ಗೋಳಾಡುವುದು ನೋಡಿರುತ್ತೇವೆ. ಇದಕ್ಕೂ ಆ ಪೋಷಕರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲವೇ ಕಾರಣವಾಗಿರುತ್ತದೆ.ಹಿಂದಿನ ಜನ್ಮದಲ್ಲಿ ನಾವು ಯಾರೊಂದಿಗಾದರೂ ಶತೃತ್ವ ಕಟ್ಟಿಕೊಂಡಿದ್ದರೆ ಅಥವಾ ಕೆಡುಕು ಮಾಡಿದ್ದರೆ,