ಬೆಂಗಳೂರು: ಶ್ರೀಕೃಷ್ಣ ದೇವರ ಭಾವಚಿತ್ರ ನೋಡುವಾಗಲೆಲ್ಲಾ ಮುಡಿಯಲ್ಲಿ ಸುಂದರ ನವಿಲುಗರಿಯೇ ನಮಗೆ ಕಾಣುವುದು. ಅಷ್ಟಕ್ಕೂ ಕೃಷ್ಣನ ಮುಡಿಗೆ ನವಿಲುಗರಿ ಬಂದಿದ್ದು ಹೇಗೆ ಗೊತ್ತಾ?ಒಮ್ಮೆ ಶ್ರೀಕೃಷ್ಣ ಕಾನನದ ನಡುವೆ ಕೂತು ತನ್ಮಯನಾಗಿ ಕೊಳಲಿನ ನಾದ ಮಾಡುತ್ತಿದ್ದನಂತೆ. ಆಗ ಕಾಡಿನಲ್ಲಿದ್ದ ನವಿಲುಗಳು ಕೃಷ್ಣನ ಕೊಳಲಿನ ದ್ವನಿಗೆ ಮನಸೋತು ಓಡೋಡಿ ಬಂದು ನರ್ತಿಸಲು ಪ್ರಾರಂಭಿಸಿದವಂತೆ.ತನ್ನ ಬಳಿಗೆ ಬಂದು ನರ್ತಿಸುವ ನವಿಲುಗಳನ್ನು ನೋಡಿ ಸಂತಸಗೊಂಡ ಕೃಷ್ಣನೂ ನರ್ತಿಸಲಾರಂಭಿಸಿದನಂತೆ. ಹೀಗೇ ಕೆಲವಾರು ದಿನಗಳವರೆಗೂ ಕೃಷ್ಣ ಕೊಳಲು ನುಡಿಸುತ್ತಾ,