ಬೆಂಗಳೂರು: ಎಲ್ಲರಿಗೂ ದೀರ್ಘಾಯುಷ್ಯದ ಆಸೆಯಿರುತ್ತದೆ. ಆರೋಗ್ಯವಾಗಿ ಬಹುಕಾಲ ಬದುಕಿರಬೇಕು ಎಂಬುದು ಎಲ್ಲರ ಕನಸು. ಆದರೆ ಅದಕ್ಕೆ ನಾವು ಮಾಡುವ ಸನ್ಮಾರ್ಗವೂ ಕಾರಣವಾಗುತ್ತದೆ.ನಾವು ಹೇಗೆ ಬದುಕುತ್ತೇವೆ ಎನ್ನುವುದರ ಮೇಲೆ ನಮ್ಮ ಆಯುಷ್ಯ ಅಡಗಿದೆ. ಮನುಷ್ಯ ಯಾವ ಮಾರ್ಗದಲ್ಲಿ ನಡೆಯಬೇಕೆಂದು ವೇದ ಪುರಾಣಗಳಲ್ಲಿ ಹೇಳಿದೆ.ಕುರ್ವನ್ನೇವೇಹಂ ಕರ್ಮಾಣಿ ಜಿಜೀವಿಷೇಚ್ಛತ ಸಮಾ. ಅಂದರೆ ಸತ್ಕರ್ಮಗಳನ್ನು ಮಾಡುತ್ತಲೇ ಮನುಷ್ಯ ನೂರು ವರ್ಷ ಬದುಕಬೇಕು. ಸತ್ಕರ್ಮದಿಂದಲೇ ದೀರ್ಘಾಯುಷ್ಯ. ಮನುಷ್ಯ ಬಹಳ ವರ್ಷಗಳ ಕಾಲ ಬದುಕಬೇಕೆಂದರೆ ಸತ್ಕರ್ಮಗಳ ಫಲದಿಂದ ಮಾತ್ರ.