Widgets Magazine

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು| Krishnaveni K| Last Modified ಬುಧವಾರ, 24 ಏಪ್ರಿಲ್ 2019 (06:45 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

 
ಮೇಷ: ಇಷ್ಟ  ಮಿತ್ರರು, ಬಂಧುಗಳ ಭೇಟಿ ಮನಸ್ಸಿಗೆ ನೆಮ್ಮದಿ, ಸಂತೋ಼ಷ ಕೊಡಲಿದೆ. ಭಾವನಾತ್ಮಕವಾಗಿ ನಿರ್ಧಾರ ಕೈಗೊಳ್ಳುವಿರಿ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿ ಬರಲಿದೆ.
 
ವೃಷಭ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
 
ಮಿಥುನ: ಶುಭ ಮಂಗಲ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಸಹೋದರರ ಜವಾಬ್ಧಾರಿ ಹೆಗಲಿಗೇರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಸಂಚಾರದಲ್ಲಿ ಜಾಗ್ರೆತೆ ವಹಿಸಿ.
 
ಕರ್ಕಟಕ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಒಡಾಟ ನಡೆಸಬೇಕಾಗುತ್ತದೆ. ವ್ಯವಹಾರದಲ್ಲಿ ಕೊಂಚ ನಷ್ಟ ಅನುಭವಿಸಬೇಕಾದೀತು. ಆದರೆ ಸೂಕ್ತ ಸಮಯದಲ್ಲಿ ಸಂಗಾತಿಯಿಂದ ನೆರವು ಸಿಗಲಿದೆ.
 
ಸಿಂಹ: ವಾಹನ-ಆಸ್ಥಿ ಖರೀದಿ ಮಾಡುವ ಯೋಜನೆಯಿದ್ದರೆ ಸ್ವಲ್ಪ ದಿನ ಮುಂದೂಡುವುದು ಒಳ್ಳೆಯದು. ನಂಬಿದವರೇ ವಂಚಿಸುವ ಸಾಧ್ಯತೆಯಿದೆ. ಹಣದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯ ಭಾಗ್ಯ ಸುಧಾರಿಸುವುದು.
 
 
ಕನ್ಯಾ: ವಿದ್ಯಾರ್ಥಿಗಳಿಗೆ ತೀವ್ರ ಪ್ರಯತ್ನ, ಪರಿಶ್ರಮ ಅಗತ್ಯ. ಕಾರ್ಯಾನುಕೂಲಕ್ಕೆ ಸಾಕಷ್ಟು ಅಡೆತಡೆಗಳು ತೋರಿಬಂದಾವು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ತಾಳ್ಮೆ ಮತ್ತು ಸಮಾಧಾನದಿಂದ ಮುನ್ನಡೆಯಿರಿ.
 
ತುಲಾ: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಭಿಸುವುದು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಲಿದ್ದು, ಸಂಭ್ರಮದ ವಾತಾವರಣವಿರುವುದು. ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ.
 
ವೃಶ್ಚಿಕ: ಋಣಾತ್ಮಕ ಚಿಂತನೆಗಳು ನಿಮ್ಮನ್ನು ಆಳುವುದಕ್ಕೆ ಅವಕಾಶ ಕೊಡಬೇಡಿ. ಆತ್ಮಸ್ಥೈರ್ಯದಿಂದ ಮುನ್ನಡೆದರೆ ಜಯ ನಿಮ್ಮದೇ. ಮಿತ್ರರಿಂದ ಸಂಕಷ್ಟದ ಸಮಯದಲ್ಲಿ ಸಹಕಾರ ಸಿಗುವುದು. ದೇವತಾ ಪ್ರಾರ್ಥನೆ ಮಾಡಿ.
 
ಧನು: ಬಯಸಿದ ಕೆಲಸಗಳನ್ನು ಹಂತ ಹಂತವಾಗಿ ನೆರವೇರಿಸಲಿದ್ದೀರಿ. ಆರ್ಥಿಕ ಮುಗ್ಗಟ್ಟುಗಳು ಎದುರಾದೀತು. ಮಹಿಳೆಯರಿಗೆ ಮಾನಸಿಕ ವೇದನೆ ಎದುರಾಗಲಿದೆ. ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ನೆಮ್ಮದಿ ಪಡೆಯುವಿರಿ.
 
ಮಕರ: ದೈವಾನುಗ್ರಹದಿಂದ ಸಾಂಸಾರಿಕವಾಗಿಯೂ ಉದ್ಯೋಗ ಕ್ಷೇತ್ರದಲ್ಲೂ ನೆಮ್ಮದಿಯ ವಾತಾವರಣವಿರುತ್ತದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದ್ದು, ಪ್ರವಾಸಕ್ಕೆ ತೆರಳುವಿರಿ.
 
ಕುಂಭ: ಆರ್ಥಿಕವಾಗಿ ಚೇತರಿಕೆ ಕಂಡುಬಂದು ಅಂದುಕೊಂಡ ಕಾರ್ಯಗಳನ್ನು ಸುಗಮವಾಗಿ ನೆರವೇರಿಸುವಿರಿ. ಹೊಸ ಪಾಲು ವ್ಯವಹಾರಕ್ಕೆ ಕೈಹಾಕುವಿರಿ. ನ್ಯಾಯಾಲಯದ ಕೆಲಸಗಳು ನಿಮ್ಮ ಪರವಾಗಲಿದೆ.
 
ಮೀನ: ಸನ್ಮಿತ್ರರ ಸಹಕಾರದಿಂದ ಎಲ್ಲವೂ ಒಳ್ಳೆಯದಾಗಲಿದೆ. ಸಂಕಷ್ಟಗಳು ಎದುರಾದರೂ ಅದರಿಂದ ಪಾರಾಗಲು ಮಿತ್ರರ ನೆರವು ಸಿಗಲಿದೆ. ಸಂಗಾತಿಯೊಂದಿಗೆ ಕೊಂಚ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ಆದರೆ ದಿನದಂತ್ಯಕ್ಕೆ ಎಲ್ಲವೂ ಒಳ್ಳೆಯದಾಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :