ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು, ಶನಿವಾರ, 4 ಮೇ 2019 (07:44 IST)

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


 
ಮೇಷ: ವ್ಯವಹಾರ ಜ್ಞಾನ ಕೊರತೆಯಿಂದ ನಷ್ಟ ಅನುಭವಿಸಬೇಕಾದೀತು. ವ್ಯಾಪಾರಿಗಳಿಗೆ ಪ್ರತಿಸ್ಪರ್ಧೆ ಎದುರಾಗಬಹುದು. ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲು ಹಿರಿಯರ ಸಲಹೆ ಪಡೆಯಿರಿ.
 
ವೃಷಭ: ವ್ಯಾಪಾರ, ವ್ಯವಹಾರಗಳು ಲಾಭದಾಯಕವಾಗಲಿದ್ದು, ಅಂದುಕೊಂಡ ಯೋಜನೆಗಳನ್ನು ಪೂರ್ತಿಗೊಳಿಸುವಿರಿ. ಸಂಗಾತಿಯ ಅಲಂಕಾರಿಕ ವಸ್ತುಗಳಿಗೆ ಖರ್ಚು ವೆಚ್ಚ ಮಾಡುವಿರಿ. ಕುಟುಂಬದಲ್ಲಿ ಅರ್ಹ ಗೌರವ ಪಡೆಯುವಿರಿ.
 
ಮಿಥುನ: ಇಷ್ಟಮಿತ್ರರೊಂದಿಗೆ ಪ್ರವಾಸ ಕೈಗೊಳ್ಳುವಿರಿ. ಮನಸ್ಸಿಗೆ ಖುಷಿ ಕೊಡುವ ಕೆಲಸಗಳನ್ನು ಮಾಡುವಿರಿ. ಹಾಗಿದ್ದರೂ ಖರ್ಚು ವೆಚ್ಚಗಳು ಅಧಿಕವಾಗುವುದು. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯ.
 
ಕರ್ಕಟಕ: ಪರಿಶ್ರಮದಿಂದ ಉದ್ಯೋಗಿಗಳಿಗೆ ಉನ್ನತ ಸ್ಥಾನ ಲಭ್ಯವಾಗಲಿದೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ದೂರ ಪ್ರಯಾಣ ಮಾಡುವರು. ಮನೆಯಲ್ಲಿ ಕಳ್ಳತನದ ಭೀತಿಯಿದ್ದು, ಅಪರಿಚಿತರನ್ನು ನಂಬಬೇಡಿ.
 
ಸಿಂಹ: ಕಾರ್ಯದೊತ್ತಡ ಅನುಭವಕ್ಕೆ ಬರಲಿದೆ. ಆದರೆ ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದ್ದು, ಸಂಭಾವ್ಯ ಕಷ್ಟಗಳು ದೂರವಾಗಲಿದೆ. ಕೋರ್ಟು ವ್ಯಾಜ್ಯಗಳಲ್ಲಿ ಅಪಜಯ ಎದುರಾಗಬಹುದು. ತಾಳ್ಮೆ ಅಗತ್ಯ.
 
 
ಕನ್ಯಾ: ಶನಿಯ ಪ್ರತಿಕೂಲ ದೃಷ್ಟಿ ನಿಮ್ಮ ಮೇಲಿದ್ದು, ಕಾರ್ಯಕ್ಷೇತ್ರದಲ್ಲಿ ನಷ್ಟ, ಕಷ್ಟ ಎದುರಾಗಬಹುದು. ಬಂಡವಾಳ ಹೂಡಿಕೆ ಮಾಡುವ ಮೊದಲು ಎಚ್ಚರಿಕೆ ಅಗತ್ಯ. ಮಹಿಳೆಯರಿಗೆ ಗೃಹ ಕೃತ್ಯದ ಒತ್ತಡವಿರುತ್ತದೆ.
 
ತುಲಾ: ದೈವಾನುಗ್ರಹದಿಂದ ಕಾರ್ಯಕ್ಷೇತ್ರದಲ್ಲಿ ಜಯ ಸಿಗುವುದು. ನಿಮ್ಮ ಕೆಲಸಕ್ಕೆ ತಕ್ಕ ಫಲ ಸಿಗುವುದು. ನಿಮ್ಮ ಕೆಲಸ ಕಾರ್ಯಗಳಿಗೆ ಕುಟುಂಬದವರ ಸಹಕಾರ ಸಿಗಲಿದೆ. ಕೃಷಿ ಕ್ಷೇತ್ರದಲ್ಲಿರುವವರಿಗೆ ಅಧಿಕ ಲಾಭ.
 
ವೃಶ್ಚಿಕ: ಮುಂದಿನ ಭವಿಷ್ಯಕ್ಕೆ ತಕ್ಕ ಯೋಜನೆಗಳನ್ನು ರೂಪಿಸುವಿರಿ. ಸಾಂಸಾರಿಕವಾಗಿ ಸಂಗಾತಿಯಿಂದ ಅಚ್ಚರಿಯ ಉಡುಗೊರೆ ಸಿಗುವುದು. ಬಂಧು ಮಿತ್ರರ ಆಗಮನದಿಂದ ಖರ್ಚು ವೆಚ್ಚಗಳು ಅಧಿಕವಾಗಬಹುದು.
 
ಧನು: ಯಾವುದೇ ಕೆಲಸವಾದರೂ ವಿವೇಚನೆಯಿಂದ ಮುಂದುವರಿಯಬೇಕು. ಇನ್ನೊಬ್ಬರ ಮೇಲೆ ಆಪಾದನೆ ಹೊರಿಸುವ ಮೊದಲು ಆಲೋಚನೆ ಮಾಡುವುದು ಮುಖ್ಯ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು.
 
ಮಕರ: ಸರ್ವತೋಮುಖ ಸಮೃದ್ಧಿಯ ಕಾಲ. ವಿವಾಹಾದಿ ಪ್ರಯತ್ನಗಳಿಗೆ ಫಲ ಸಿಗುವುದು. ಕೋರ್ಟು ಕಚೇರಿ ವ್ಯವಹಾರಗಳು ನಿಮ್ಮ ಪರವಾಗಿ ಬರಲಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ.
 
ಕುಂಭ: ಸುಖ ದುಃಖ ಎರಡರ ಸಮ್ಮಿಲನ ಸಮ್ಮಿಳನದ ದಿನವಿಂದು. ಅನವಶ್ಯಕವಾಗಿ ಅಪವಾದಗಳು ಬರುವುದು. ತಾಳ್ಮೆಯಿಂದ ವ್ಯವಹರಿಸುವುದು ಮುಖ್ಯ. ಉದ್ಯೋಗ ಸಂಬಂಧವಾಗಿ ದೂರ ಸಂಚಾರ ಮಾಡಬೇಕಾಗಿ ಬರಬಹುದು.
 
ಮೀನ: ಸನ್ಮಿತ್ರರ ಸಹಕಾರದಿಂದ ಎಲ್ಲವೂ ಒಳ್ಳೆಯದಾಗಲಿದೆ. ಸಂಕಷ್ಟಗಳು ಎದುರಾದರೂ ಅದರಿಂದ ಪಾರಾಗಲು ಮಿತ್ರರ ನೆರವು ಸಿಗಲಿದೆ. ಸಂಗಾತಿಯೊಂದಿಗೆ ಕೊಂಚ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ಆದರೆ ದಿನದಂತ್ಯಕ್ಕೆ ಎಲ್ಲವೂ ಒಳ್ಳೆಯದಾಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಲಕ್ಷ್ಮೀ ದೇವಿ ಯಾಕೆ ಸದಾ ಪತಿ ಶ್ರೀಮನ್ನಾರಾಯಣನ ಪಾದ ಒತ್ತುತ್ತಾಳೆ?

ಬೆಂಗಳೂರು: ಲಕ್ಷ್ಮೀ ದೇವಿ ಶ್ರೀಮನ್ನಾರಾಯಣನ ಪಾದವನ್ನು ಒತ್ತುವ ಹಲವು ಚಿತ್ರಗಳನ್ನು ನಾವು ನೋಡಿರುತ್ತೇವೆ. ...

news

ಗ್ರಹಚಾರ ಫಲವೆಂದರೇನು? ಇದರ ಲೆಕ್ಕಾಚಾರ ಹೇಗೆ?

ಬೆಂಗಳೂರು: ಗ್ರಹ ಗೋಚರವೆಂದರೆ ನವಗ್ರಹಗಳು ಭೂ ಚಕ್ರದ ಸುತ್ತಲೂ ಮೇಷ ದ್ವಾದಶ ರಾಶಿಗಳನ್ನು ಸುತ್ತುವುದು. ...

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

news

ದೀಪದ ಬತ್ತಿಯಿಂದ ಯಾವ ರಾಶಿಯವರಿಗೆ ಯಾವ ದೋಷ ನಿವಾರಣೆಯಾಗುತ್ತದೆ?

ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ...