Widgets Magazine

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು| Krishnaveni K| Last Modified ಮಂಗಳವಾರ, 28 ಮೇ 2019 (08:45 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

 
ಮೇಷ: ಕೌಟುಂಬಿಕವಾಗಿ ನೀವು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಹಿರಿಯರ ಅಸಮಾಧಾನಕ್ಕೆ ಕಾರಣವಾಗಬಹುದು. ಆರ್ಥಿಕವಾಗಿ ಅಧಿಕ ಖರ್ಚು ನಿಮ್ಮನ್ನು ಚಿಂತೆಗೀಡು ಮಾಡಲಿದೆ. ಆರೋಗ್ಯದಲ್ಲಿ ಸುಧಾರಣೆ.
 
ವೃಷಭ: ಸಂಗಾತಿಯ ಕೋಪಕ್ಕೆ ಗುರಿಯಾಗುವಿರಿ. ಉದ್ಯೋಗ ನಿಮಿತ್ತ ಅಧಿಕ ಓಡಾಟದಿಂದ ದೇಹಾಯಾಸವಾಗಬಹುದು. ಕೃಷಿ ಕ್ಷೇತ್ರದಲ್ಲಿರುವವರಿಗೆ ಚೇತರಿಕೆ ಸಿಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
 
ಮಿಥುನ: ಆಸ್ತಿ, ಮನೆ ಖರೀದಿಗೆ ಇದು ಹೇಳಿ ಮಾಡಿಸಿದ ಸಮಯ. ಹೆಚ್ಚಿನ ಆದಾಯಕ್ಕೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಸನ್ಮಿತ್ರರ ಭೇಟಿಯಿಂದ ಮನಸ್ಸಿಗೆ ನೆಮ್ಮದಿಯಾಗಬಹುದು. ಆರ್ಥಿಕವಾಗಿ ಜಾಗ್ರತೆಯಿಂದಿರಿ.
 
ಕರ್ಕಟಕ: ವಿದ್ಯಾರ್ಥಿಗಳಿಗೆ ಸತತ ಪರಿಶ್ರಮದ ಅಗತ್ಯವಿದೆ. ರಾಜಕೀಯ ರಂಗದಲ್ಲಿರುವವರಿಗೆ ಶತ್ರುಗಳಿಂದ ಪರಾಭವ ಭೀತಿ. ಮನಸ್ಸಿನ ನೆಮ್ಮದಿಗಾಗಿ ಕುಲದೇವರ ಪ್ರಾರ್ಥನೆ ಮಾಡಿ. ಆರೋಗ್ಯದಲ್ಲಿ ಸುಧಾರಣೆ.
 
ಸಿಂಹ: ಸಾಮಾಜಿಕವಾಗಿ ನಿಮ್ಮ ಯಶಸ್ಸನ್ನು ಯಾರೂ ತಡೆಹಿಡಿಯಲಾಗದು. ಹೆಸರು, ಕೀರ್ತಿ ಸಂಪಾದಿಸಲಿದ್ದೀರಿ. ನಾಲ್ಕು ಜನರಿಗೆ ಉಪಯೋಗವಾಗುವಂತಹ ನಿರ್ಧಾರ ಕೈಗೊಳ್ಳಲಿದ್ದೀರಿ. ಒಟ್ಟಾರೆ ದೈವಾನುಕೂಲದಿಂದ ನಿಮ್ಮ ದಿನ ಶುಭದಿನವಾಗಲಿದೆ.
 
ಕನ್ಯಾ: ಹದಿ ಹರೆಯದ ವಯಸ್ಸಿನವರಿಗೆ ಚಿತ್ತ ಚಂಚಲತೆ ಕಾಡಲಿದೆ. ನಿರ್ಧಾರ ಕೈಗೊಳ್ಳುವಲ್ಲಿ ಸೋಲುವಿರಿ. ಹಿರಿಯರ ಮಾರ್ಗದರ್ಶನ ಅಗತ್ಯ. ವ್ಯಾಪಾರಿಗಳು ಲಾಭ ಗಳಿಸುವರು. ಆದರೆ ಖರ್ಚು ವೆಚ್ಚದ ಬಗ್ಗೆ ಲೆಕ್ಕವಿಟ್ಟುಕೊಳ್ಳಿ.
 
ತುಲಾ: ಸರ್ಕಾರಿ ಉದ್ಯೋಗಿಗಳಿಗೆ ಅಧಿಕ ಓಡಾಟವಿರುತ್ತದೆ. ನಿಮ್ಮ ಏಳಿಗೆಗೆ ಬಂಧುಮಿತ್ರರು ಅಸೂಯೆಪಡುವರು. ಪ್ರೀತಿ ಪಾತ್ರರಿಗಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ವೃಶ್ಚಿಕ: ಅವಿವಾಹಿತರಿಗೆ ಕಂಕಣ ಭಾಗ್ಯವಿದ್ದರೂ ಮನಸ್ಸಿಗೆ ಹಿಡಿಸಿದ ಸಂಬಂಧ ಬರಲು ಕೆಲವು ದಿನ ಕಾಯಬೇಕಾಗುತ್ತದೆ. ಅನಿರೀಕ್ಷಿತವಾಗಿ ಬರುವ ಬಂಧು ಮಿತ್ರರಿಂದ ಸಂತಸದ ವಾತಾವರಣವಿರುತ್ತದೆ. ಖರ್ಚಿನ ಬಗ್ಗೆ ಮಿತಿಯಿರಲಿ.
 
ಧನು: ಅನಗತ್ಯವಾಗಿ ಹಿರಿಯರು ಕಿರಿಯರ ಮೇಲೆ ಸಿಡಿಮಿಡಿಗೊಳ್ಳುವಂತಹ ಪ್ರಸಂಗ ಎದುರಾಗಲಿದೆ. ಮಾತಿನ ಮೇಲೆ ನಿಗಾ ಇರಲಿ. ಸಂಗಾತಿಯ ಮಾತಿಗೆ ಕಿವಿಗೊಡಿ. ಮಕ್ಕಳಿಂದ ಸಂತಸ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ಮಕರ: ಸಾಲ ವ್ಯವಹಾರಗಳನ್ನು ಇಂದು ಇಟ್ಟುಕೊಂಡರೆ ಮರಳಿ ಬಾರದು. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಇಷ್ಟಮಿತ್ರರೊಂದಿಗೆ ಪ್ರವಾಸ ತೆರಳುವಿರಿ. ದೂರ ಪ್ರಯಾಣದಲ್ಲಿ ಕೆಲವೊಂದು ಅಡೆತಡೆಗಳು ಎದುರಾದರೂ ಕಾರ್ಯಸಾಧನೆಯಾಗುವುದು.
 
ಕುಂಭ: ಪ್ರೀತಿ ಪಾತ್ರರಿಗಾಗಿ ಹೆಚ್ಚಿನ ಸಮಯ ಮೀಸಲಿಡಬೇಕಾಗುತ್ತದೆ. ನಿಮಗಿಷ್ಟವಿಲ್ಲದಿದ್ದರೂ ಇತರರಿಗಾಗಿ ಕೆಲಸ ಮಾಡಬೇಕಾಗುತ್ತದೆ. ಕೌಟುಂಬಿಕ ಜವಾಬ್ಧಾರಿಗಳಿಂದ ಹೈರಾಣಾಗುವಿರಿ. ಆದರೆ ತಾಳ್ಮೆಯಿಂದಿದ್ದರೆ ಮುಂದೆ ಶುಭ ಫಲವಿದೆ.
 
ಮೀನ: ಯಾವುದೇ ಕಾರ್ಯ ಸಾಧನೆಗೆ ಹೊರಡುವುದಿದ್ದರೂ ಮನೆಯಲ್ಲಿರುವ ಹಿರಿಯರ ಅಭಿಪ್ರಾಯ ಆಲಿಸಿ ಮುಂದುವರಿಯುವುದು ಒಳ್ಳೆಯದು. ಮಹಿಳಾ ನೌಕರ ವರ್ಗದವರಿಗೆ ಶುಭ ಸುದ್ದಿ ಕಾದಿದೆ. ಆದರೆ ಆರೋಗ್ಯದಲ್ಲಿ ಕಾಳಜಿ ಅಗತ್ಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :