ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು, ಮಂಗಳವಾರ, 25 ಜೂನ್ 2019 (08:46 IST)

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


 
ಮೇಷ: ಅನಿರೀಕ್ಷಿತವಾಗಿ ಕೆಲವೊಂದು ಖರ್ಚು ವೆಚ್ಚಗಳು ಎದುರಾಗಲಿವೆ. ಸಂಗಾತಿಯ ಇಷ್ಟಗಳಿಗೆ ಕಿವಿಗೊಡಬೇಕಾಗುತ್ತದೆ. ವ್ಯವಹಾರ ಕ್ಷೇತ್ರದಲ್ಲಿ ಕೆಲವೊಂದು ಅಡೆತಡೆಗಳು ಎದುರಿಸಬೇಕಾಗುತ್ತದೆ. ತಾಳ್ಮೆ ಅಗತ್ಯ.
 
ವೃಷಭ: ಗೃಹೋಪಯೋಗಿ ವಸ್ತುಗಳಿಗಾಗಿ ಹೆಚ್ಚಿನ ಧನವ್ಯಯ ಮಾಡಲಿದ್ದೀರಿ. ಪ್ರೀತಿ ಪಾತ್ರರಿಗಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿಬರಲು ಕೆಲ ಸಮಯ ಕಾಯಬೇಕಾಗುತ್ತದೆ.
 
ಮಿಥುನ: ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡಬೇಕಾಗಿ ಬರುತ್ತದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ಭೂಮಿ, ಮನೆ ಖರೀದಿಗೆ ಇದು ಸೂಕ್ತ ಕಾಲ. ಲೆಕ್ಕಪತ್ರಗಳ ಬಗ್ಗೆ ಎಚ್ಚರಿಕೆಯಿಂದಿರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
 
ಕರ್ಕಟಕ: ಹಿರಿಯರ ತೀರ್ಥ ಯಾತ್ರೆಗೆ ವ್ಯವಸ್ಥೆ ಮಾಡುವಿರಿ. ನಿರುದ್ಯೋಗಿಗಳು ಸ್ವ ಉದ್ಯೋಗದತ್ತ ಮನಸ್ಸು ಮಾಡುವರು. ಶುಭ ಕಾರ್ಯ ನಿಮಿತ್ತ ಓಡಾಟ ನಡೆಸಬೇಕಾಗುತ್ತದೆ. ದೇಹಾರೋಗ್ಯದ ಬಗ್ಗೆ ಗಮನವಿರಲಿ.
 
ಸಿಂಹ: ದಾಯಾದಿಗಳೊಂದಿಗೆ ಇದುವರೆಗೆ ಇದ್ದ ಮನಸ್ತಾಪಗಳು ದೂರವಾಗಲಿದೆ. ನಿರೀಕ್ಷಿತ ಧನಾಗಮನದಿಂದ ಅಂದುಕೊಂಡ ಕಾರ್ಯಗಳನ್ನು ನೆರವೇರಿಸುವಿರಿ. ವಿನಾಕಾರಣ ಋಣಾತ್ಮಕ ಚಿಂತೆಗಳಿಗೆ ಅವಕಾಶ ಮಾಡಿಕೊಡದಿರಿ.
 
ಕನ್ಯಾ: ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚಿನ ವೆಚ್ಚವಾಗಲಿದೆ. ವಾಹನ ಖರೀದಿಗೆ ಚಿಂತನೆ ನಡೆಸುವಿರಿ. ಆದರೆ ಆರ್ಥಿಕವಾಗಿ ಖರ್ಚು ವೆಚ್ಚದ ಬಗ್ಗೆ ಹಿಡಿತವಿರಲಿ. ವಾತ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಬಹುದು. ಎಚ್ಚರಿಕೆ.
 
ತುಲಾ: ಇಷ್ಟ ಮಿತ್ರರೊಂದಿಗೆ ಪ್ರವಾಸ, ಭೋಜನ ಸಾಧ್ಯತೆಯಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು. ಹಿರಿಯರೊಂದಿಗೆ ವಾಗ್ವಾದಕ್ಕಿಳಿಯಬೇಡಿ. ಇದುವರೆಗೆ ಇದ್ದ ಆರೋಗ್ಯ ಸಮಸ್ಯೆಗಳು ದೂರವಾಗಲಿದೆ.
 
ವೃಶ್ಚಿಕ: ನಿರುದ್ಯೋಗಿಗಳು ಉದ್ಯೋಗ ನಿಮಿತ್ತ ದೂರ ಸಂಚಾರ ಕೈಗೊಳ್ಳಬೇಕಾಗುತ್ತದೆ. ಮನೆಯಲ್ಲಿ ಕಳ್ಳತನದ ಭೀತಿಯಿದೆ. ಅಪರಿಚಿತರನ್ನು ನಂಬಿ ಹೊಸ ವ್ಯವಹಾರಕ್ಕೆ ಕೈ ಹಾಕಬೇಡಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
 
ಧನು: ಮಕ್ಕಳಿಂದ ಸಂತಸದ ವಾರ್ತೆ ನಿರೀಕ್ಷಿಸಬಹುದು. ಸಹೋದರರೊಂದಿಗೆ ಕಿರಿ ಕಿರಿ ಎದುರಿಸಬೇಕಾಗುತ್ತದೆ. ಶುಭ ಕಾರ್ಯಗಳಲ್ಲಿ ಭಾಗಿಯಾಗುವಿರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.
 
ಮಕರ: ದೈವಾನುಕೂಲದಿಂದ ಇಂದು ನೀವು ಅಂದುಕೊಂಡ ಕಾರ್ಯಗಳು ನೆರವೇರುವುದು. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡುವಿರಿ. ರಾಜಕೀಯವಾಗಿ ನಿಮ್ಮ ಸ್ಥಾನಮಾನ ಹೆಚ್ಚುವುದು.
 
ಕುಂಭ: ಅನಗತ್ಯವಾಗಿ ಋಣಾತ್ಮಕ ಚಿಂತನೆಗಳಿಂದ ಕೆಲಸದ ಮೇಲೆ ಉತ್ಸಾಹ ಕಳೆದುಕೊಳ್ಳುವಿರಿ. ಮಹಿಳೆಯರಿಂದ ಕಷ್ಟದ ಸಮಯದಲ್ಲಿ ನೆರವು ಸಿಗುವುದು. ವ್ಯಾಪಾರಿಗಳಿಗೆ ನಷ್ಟದ ಭೀತಿಯಿದೆ. ದೇವತಾ ಪ್ರಾರ್ಥನೆ ಮಾಡಿ.
 
ಮೀನ: ಆಸ್ತಿ ವಿವಾದಗಳು ಹಿರಿಯರ ಮಧ್ಯಸ್ಥಿಕೆಯಿಂದ ಬಗೆಹರಿಯುವುದು. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಮನೆಗೆ ಬಂಧು ಮಿತ್ರರ ಆಗಮನವಾಗಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಸರ್ಪದೋಷದಿಂದ ಏನೆಲ್ಲಾ ಕೆಡುಕಾಗುತ್ತದೆ ಗೊತ್ತಾ?

ಬೆಂಗಳೂರು: ಸರ್ಪದೋಷ ಬಂದಾಗ ನಾವು ಸುಬ್ರಹ್ಮಣ್ಯ ದೇವಾಲಯಗಳಲ್ಲಿ ನಾಗನಿಗೆ ವಿಶೇಷ ಸೇವೆ ಸಲ್ಲಿಸಿದರೆ ಅದು ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಈ ರೀತಿಯ ಶನಿ ದೋಷಗಳಿದ್ದಾಗ ಯಾವೆಲ್ಲಾ ಪೂಜೆ ಮಾಡಬೇಕು?

ಬೆಂಗಳೂರು: ಶನಿ ದೆಸೆ ಎಂದರೆ ಎಲ್ಲರೂ ಕಷ್ಟದ ಸಮಯ ಎಂದೇ ಭಯಭೀತರಾಗುತ್ತಾರೆ. ಆದ್ದರಿಂದ ಜನ್ಮಸ್ಯ ಶನಿ, ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.