ನಿಮ್ಮ ನಕ್ಷತ್ರಕ್ಕೆ ಅನುಗುಣವಾಗಿ ದೇವರನ್ನು ಪೂಜೆ ಮಾಡಿ

ಬೆಂಗಳೂರು, ಸೋಮವಾರ, 29 ಆಗಸ್ಟ್ 2016 (09:06 IST)

ಮಾನವ ಸಮುದಾಯದ ಸಾಮಾಜಿಕ ಹಾಗೂ ಸಾಂಸ್ಕ್ಕತಿಕ ಜೀವನದ ಸ್ವರೂಪವು ಅದರ ಮೂಲಭೂತ ಜೀವನ-ಸಿದ್ದಾಂತವನ್ನು ಅವಲಂಬಿಸಿರುತ್ತದೆ. ಹಿಂದೂಗಳಿಗೆ ಮೂಲ ನೆಲೆಯಾಗಿರುವುದು ಧರ್ಮ. ಈ ಧರ್ಮಕ್ಕೆ ಮೂರು ದೃಷ್ಟಿಕೋನಗಳು.
1. ಮೂಲಭೂತ ತತ್ವಗಳ ಅಥವಾ ಸಿದ್ದಾಂತದ ದೃಷ್ಟಿಕೋನ 2. ಆ ತತ್ವಗಳನ್ನು ಜನ ಸಾಮಾನ್ಯನಿಗೆ ನಿರೂಪಿಸುವ ಪೌರಾಣಿಕ ದೃಷ್ಟಿಕೋನ. 3. ಆ ತತ್ವಗಳ ಸಿದ್ದಿಗಾಗಿ ನಿತ್ಯ ನೈಮಿತ್ತಿಕ ಕರ್ಮಗಳ ಶ್ರದ್ದಾಪೂರ್ಣ ಆಚರಣೆಯ ದೃಷ್ಟಿಕೋನ.
 
ಎರಡನೇ ಬಗೆಯ ವರ್ಗೀಕರಣವನ್ನು ವ್ರತಕ್ಕೆ ನಿಗದಿಯಾದ ಕಾಲದ ಆಧಾರದ ಮೇಲೆ ಮಾಡಬಹುದು. ಒಂದು ದಿನ ಮಾತ್ರ ನಡೆಯುವ ವ್ರತವನ್ನು ಶಿದಿನವ್ರತಷಿವೆಂದೂ, ಒಂದು ವಾರ ನಡೆಯುವುದನ್ನು ಶಿವಾರವ್ರತಷಿವೆಂದೂ, ಒಂದು ಪಕ್ಷದ ಕಾಲ ನಡೆಯುವುದನ್ನು ಶಿಪಕ್ಷವ್ರತಷಿ ವೆಂದೂ ಒಂದು ತಿಥಿ ಅಥವಾ ಒಂದು ನಕ್ಷತ್ರದ ಅವಧಿಯಲ್ಲಿ ನಡೆಸಬೇಕಾದ್ದನ್ನು ಶಿವ್ರತಷಿ ವೆಂದು ವಿಂಗಡಿಸಲಾಗಿದೆ.
 
ಪುರಾಣ 102ನೇ ಅಧ್ಯಾಯದಲ್ಲಿ ನಕ್ಷತ್ರಗಳ ಆರಾಧನೆಯನ್ನು ಹೇಗೆ ಆಚರಿಸಬೇಕೆಂದು ವಿವರವಾಗಿ ತಿಳಿಸಿದ್ದಾರೆ. ವ್ಯಕ್ತಿಗಳ ಜನ್ಮಕಾಲದಲ್ಲಿಯ ನಕ್ಷತ್ರವನ್ನು ತಿಳಿದು ಆಚರಿಸಿದರೆ. ದೋಷಗಳು ಪರಿಹಾರವಾಗಿ, ಶುಭಫಲವನ್ನೇ ನೀಡುತ್ತವೆ. ನಿಯಮಗಳನ್ನು ತಿಳಿದು ಆಚರಿಸಬೇಕು. 
 
ಅಶ್ವಿನಿ ನಕ್ಷತ್ರದ ಅಧಿದೇವತೆ, ಅಶ್ವಿನಿ ಕುಮಾರರಾಗಿದ್ದು, ಅಶ್ವಿನಿ ನಕ್ಷತ್ರದ ದಿವಸ ಅಶ್ವಿನಿ ಕುಮಾರರನ್ನು ಪೂಜಿಸಿದರೆ, ಆರೋಗ್ಯ ವೃದ್ದಿಸುತ್ತದೆ. ದೀರ್ಘಾಯಸ್ಸು ಉಂಟಾಗುತ್ತದೆ.
 
ಭರಣಿ ನಕ್ಷತ್ರದ ಅಧಿದೇವತೆ ಯಮನಾಗಿದ್ದು, ಭರಣಿ ನಕ್ಷತ್ರದ ದಿವಸ ಯಮನನ್ನು ನೀಲಿ ಬಣ್ಣದ ಹೂವುಗಳಿಂದ ಪೂಜಿಸಿದರೆ, ಅಕಾಲಿಕ ಮೃತ್ಯುವಿನಿಂದ ಪಾರಾಗಬಹುದು.
 
ಕೃತಿಕೆ ನಕ್ಷತ್ರದ ಅಧಿದೇವತೆ ಅಗ್ನಿಯಾಗಿದ್ದು, ಕೃತಿಕ ನಕ್ಷತ್ರದ ದಿವಸ ಅಗ್ನಿ ದೇವತೆಯನ್ನು ಕೆಂಪು ಹೂವುಗಳಿಂದ ಪೂಜಿಸಿದರೆ, ಅಪೇಕ್ಷಿಸಿದ ಕಾರ್ಯಗಳು ಫಲಿಸುತ್ತದೆ.
 
ರೋಹಿಣಿ ನಕ್ಷತ್ರದ ಅಧಿದೇವತೆ ಬ್ರಹ್ಮನಾಗಿದ್ದು, ರೋಹಿಣಿ ನಕ್ಷತ್ರದ ದಿವಸ ಬ್ರಹ್ಮನನ್ನು ಪೂಜಿಸಿದರೆ, ಕೆಲಸ ಕಾರ್ಯಗಳು ಸುಗಮವಾಗಿ ಅಭಿವೃದ್ದಿ ಹೊಂದುತ್ತದೆ.
 
ಮೃಗಶಿರ ನಕ್ಷತ್ರದ ಅಧಿದೇವತೆ ಚಂದ್ರನಾಗಿದ್ದು, ಮೃಗಶಿರ ನಕ್ಷತ್ರದ ದಿವಸ ಚಂದ್ರನನ್ನು ಪೂಜಿಸಿದರೆ, ಜ್ಞಾನ ಮತ್ತು ಆರೋಗ್ಯ ವೃದ್ದಿಯಾಗುತ್ತದೆ. 
 
 
 



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ

ಜಾತಕದ ಪ್ರಕಾರ ಶನಿ ನಿಮ್ಮ ರಾಶಿಯಲ್ಲಿದ್ದಾನಾ ? ಅಥವಾ ಶನಿ ನಿಮ್ಮನ್ನು ಕಾಡುತ್ತಿದ್ದಾನಾ ? ಶನಿ ಕಾಟದಿಂದ ...

news

ನಿಮ್ಮ ಮದುವೆ ಯಾವಾಗ ಆಗುತ್ತೆ ಗೊತ್ತಾ ? ಕನಸಿನಿಂದ ತಿಳಿದುಕೊಳ್ಳಿ

1. ಕನಸಿನಲ್ಲಿ ಕಸೂತಿ ಬಟ್ಟೆಗಳು ಕಂಡರೆ, ನಿಮಗೆ ಸುಂದರವಾದ ಮತ್ತು ಪವಿತ್ರ ಹುಡುಗಿ/ಹುಡುಗನ ಜೊತೆಗೆ ...

news

ನಿಮ್ಮ ಹಾಗೂ ನಿಮ್ಮ ಮಕ್ಕಳ ಮೂಲ ಸ್ವಭಾವ ಜ್ಯೋತಿಷ್ಯದ ಮೂಲಕ ತಿಳಿಯಬೇಕೇ?

ಹುಟ್ಟಿದ ಮಕ್ಕಳ ಮೂಲ ಸ್ವಭಾವವನ್ನು ಜ್ಯೋತಿಷ್ಯದ ಮೂಲಕ ಅರಿಯಲು ಸಾಧ್ಯ. ಹುಟ್ಟಿದ ದಿನಾಂಕದ ಮೂಲಕ ...

news

ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಳಕ್ಕೆ ಜ್ಯೋತಿಷ್ಯದ ಪರಿಹಾರಗಳು

ಪತಿ ಪತ್ನಿಯರಾಗಿರಲಿ ಅಥವಾ ಗೆಳೆಯ, ಗೆಳತಿಯ ಪ್ರೇಮವಾಗಿರಲಿ, ಪ್ರೀತಿ ಮತ್ತು ವಾತ್ಸಲ್ಯವು ಪ್ರತಿಯೊಂದು ...