ಅದೃಷ್ಟಬಲದಿಂದ ಶ್ರೀಮಂತರಾಗಲು ಪರಿಹಾರಗಳು

ಬೆಂಗಳೂರು, ಬುಧವಾರ, 22 ಜೂನ್ 2016 (12:32 IST)

ಶ್ರೀಮಂತರಾಗುವುದು ಪ್ರತಿಯೊಬ್ಬರ ಮೂಲಭೂತ ಕನಸಾಗಿದ್ದು,  ಹಣವನ್ನು ಆಕರ್ಷಿಸಿ ಶ್ರೀಮಂತರಾಗಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಾರೆ. ಕೆಲವರು ಶ್ರೀಮಂತರಾಗುವ ಪ್ರಯತ್ನದಲ್ಲಿ ತೇರ್ಗಡೆಯಾಗುತ್ತಾರೆ ಮತ್ತು ಕೆಲವರು ವಿಫಲರಾಗುತ್ತಾರೆ. ನಾವು ಮತ್ತಷ್ಟು ಮುಂದುವರಿಯುವ ಮುಂಚೆ ಶ್ರೀಮಂತಿಕೆಯ ಅರ್ಥವೇನೆಂದು ತಿಳಿಯಬೇಕು.
 
ಅದೃಷ್ಟವು ಚೆನ್ನಾಗಿದ್ದರೆ, ಯಾವುದೇ ಅನುಮಾನವಿಲ್ಲದೇ, ಯಾವುದೇ ಶ್ರಮವಿಲ್ಲದೇ ವ್ಯಕ್ತಿ ಶ್ರೀಮಂತರಾಗುತ್ತಾರೆ. ಹಣಕಾಸಿನ ಸಮಸ್ಯೆಗಳನ್ನು ಎದುರಿಸುವ ವ್ಯಕ್ತಿಗೆ ವಿಶೇಷ ಪರಿಹಾರಗಳನ್ನು ಇಲ್ಲಿ ನೀಡಲಾಗಿದೆ.

ಶ್ರೀಮಂತರಾಗಲು ಪ್ರಮುಖ ಪರಿಹಾರಗಳು
1. ಮೊದಲಿಗೆ ಮುಂಜಾನೆ ದಿನನಿತ್ಯವೂ ಎದ್ದು ನಿಮ್ಮ ಎರಡೂ ಅಂಗೈಗಳನ್ನು ನೋಡಿಕೊಂಡು ಲಕ್ಷ್ಮಿಯನ್ನು ನೆನಪಿಸಿಕೊಳ್ಳಿ. ಈ ಸಂದರ್ಭದಲ್ಲಿ ಹಣವನ್ನು ಪಡೆಯುವ ನಿಮ್ಮ ಇಚ್ಛೆಯ ಕುರಿತು ಸಕಾರಾತ್ಮಕವಾಗಿರಿ. ಕೆಲವು ಕಾಲ ನಿಯಮಿತ ಅಭ್ಯಾಸದ ಬಳಿಕ ನೀವು ಹಣ ಸಂಪಾದಿಸಲು ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ.
2. ಪ್ರತಿ ಶುಕ್ರವಾರ ಗಜ ಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿ ದೀಪವನ್ನು ಹಚ್ಚಿ ಕೆಂಪು ಹೂವನ್ನು ದೇವರಿಗೆ ಅರ್ಪಿಸಿ ಶ್ರೀಮಂತರಾಗಲು ಪ್ರಾರ್ಥಿಸಿ.
 
3. ಮಹಿಳೆಯರನ್ನು ಎಲ್ಲೂ ಕೂಡ ಅವಮಾನಿಸಬೇಡಿ.
4. ಸೋಮವಾರ ಮುತ್ತಿನ ಉಂಗುರಕ್ಕೆ ಮಹಾಲಕ್ಷ್ಮಿಯ ಮಂತ್ರದೊಂದಿಗೆ ಅಭಿಷೇಕ ಮಾಡಿ ಮತ್ತು ಪವಿತ್ರ ಕಾಲದಲ್ಲಿ ಅದನ್ನು ಧರಿಸಿ. ಇದು ಹಣ ಆಕರ್ಷಣೆಗೆ ನೆರವಾಗುತ್ತದೆ.
 
5.ಸದಾ ನನ್ನ ಜೀವನ ಸಮೃದ್ಧಿಯಾಗುತ್ತದೆ, ಎಲ್ಲಾ ದಿಕ್ಕಿನಿಂದ ಹಣ ಹರಿದುಬರುತ್ತದೆಂದು ಯೋಚಿಸಿ.
6.ಪಿತೃದೋಷದಿಂದ ಯಾರಾದರೂ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೆ, ಪಿತೃಶಾಂತಿ ಪೂಜೆಯು ಹೆಚ್ಚು ನೆರವಾಗುತ್ತದೆ.
 7. ರಾಹುವಿನ ದೋಷದ ಕೆಟ್ಟ ಪರಿಣಾಮದಿಂದ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೆ ರಾಹು ಶಾಂತಿ ಪೂಜೆ ಹೆಚ್ಚು ನೆರವಾಗುತ್ತದೆ.
 
8. ಮಹಾದಶದಲ್ಲಿ ಯಾವುದೇ ಉಪದ್ರವಕಾರಿ ಗ್ರಹವು ಸಂಚರಿಸುತ್ತಿದ್ದರೆ ಆ ವ್ಯಕ್ತಿ ಜೀವನದಲ್ಲಿ ವಿಚಿತ್ರ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
 
9. ಗುರು ಪುಷಾ ಯೋಗದಲ್ಲಿ ಜಲಕುಂಬಿಯನ್ನು ತೆಗೆದುಕೊಂಡು ಅದನ್ನು ಅಭಿಷೇಕದಿಂದ ಶುದ್ಧಗೊಳಿಸಿ ಹಳದಿ ಬಟ್ಟೆಯಲ್ಲಿ ಅದನ್ನು ಇರಿಸಿ ಮಹಾಲಕ್ಷ್ಮಿ ಮಂತ್ರವನ್ನು 11 ಬಾರಿ ಉಚ್ಚರಿಸಿ ಮನೆಯಲ್ಲಿ ಇರಿಸಿ. ಇದು ಹಣವನ್ನು ಆಕರ್ಷಿಸಲು ನೆರವಾಗಿ ಶ್ರೀಮಂತಿಕೆ ಲಭಿಸುತ್ತದೆ. 
 
10. ತುಳಸಿ ಸಸ್ಯವನ್ನು ನಿಯಮಿತವಾಗಿ ಪೂಜಿಸಿ ಹಣಕ್ಕಾಗಿ ಪ್ರಾರ್ಥಿಸಿ.
11. ಸಿದ್ಧಾ ಸ್ಫಟಿಕದ ಶ್ರೀ ಯಂತ್ರವನ್ನು ಪಡೆದು ಮನೆಯಲ್ಲಿ ನಿಯಮಿತವಾಗಿ ಪೂಜಿಸಿ.
12. ಬೇಲ್ ಎಲೆಗಳನ್ನು ತೆಗೆದುಕೊಂಡು ಶ್ರೀಗಂಧದ ಪುಡಿಯಲ್ಲಿ ಶ್ರೀಂ ಎಂದು ಬರೆದು ಶಿವಲಿಂಗಕ್ಕೆ ಅರ್ಪಿಸಿ ಹಣಕ್ಕಾಗಿ ಪ್ರಾರ್ಥಿಸಿ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಮಗುವಿನ ವೃತ್ತಿಜೀವನ ರೂಪಿಸಲು ಐದು ನಿಯಮಗಳು

ತಂದೆ, ತಾಯಿಗಳು ಬರೀ ತಮ್ಮ ಕನಸುಗಳನ್ನು ಮಾತ್ರ ಮಕ್ಕಳ ಮೇಲೆ ಹೇರದೇ ಮಕ್ಕಳ ಯಶಸ್ವಿ ಭವಿಷ್ಯಕ್ಕೆ ...

news

ನಿಮ್ಮ ಭವಿಷ್ಯದ ಮುನ್ಸೂಚನೆಗೆ ಕನಸುಗಳು ನೆರವಾಗುತ್ತವೆಯೇ?

ಮಾನವ ಜೀವನದಲ್ಲಿ ಕನಸುಗಳಿಗೆ ಪ್ರಾಮುಖ್ಯತೆ ಮತ್ತು ಉದ್ದೇಶವಿರುವುದು ಸಂಶೋಧನೆ ಮತ್ತು ವೈಜ್ಞಾನಿಕ ...

news

ವೃತ್ತಿಜೀವನದ ಹಾದಿಯಲ್ಲಿ ಜೋತಿಷ್ಯದ ಪರಿಣಾಮ

ಜೀವನದ ಸಾಗರವನ್ನು ಮಾನವ ದಾಟಲು ಜಾತಕಕ್ಕಿಂತ ಉತ್ತಮ ದೋಣಿ ಬೇರೊಂದಿಲ್ಲ ಎಂಬ ಮಾತಿದೆ. ಸಂಪೂರ್ಣ ...

news

ವಿವಾಹಕ್ಕೆ ಮುಂಚೆ ಸಂಗಾತಿಗಳ ನಡುವೆ ಹೊಂದಾಣಿಕೆ ಅತ್ಯವಶ್ಯಕ

ವಿವಾಹ ಬಂಧಕ್ಕೆ ಮುಂಚೆ ಸಂಗಾತಿಗಳ ನಡುವೆ ಹೊಂದಾಣಿಕೆ ಗಮನಾರ್ಹ ಅಂಶವಾಗಿದೆ. ವಿವಾಹ ಸಂಬಂಧ ...