Widgets Magazine

ದರಿದ್ರ ಯೋಗ ಕಳೆಯಲು ಈ ಪೂಜೆ ಮಾಡಿ

ಬೆಂಗಳೂರು| Krishnaveni K| Last Modified ಸೋಮವಾರ, 1 ಏಪ್ರಿಲ್ 2019 (08:48 IST)
ಬೆಂಗಳೂರು: ಮನೆಯಲ್ಲಿ ಸುಖ, ಐಶ್ವರ್ಯ ಸಮೃದ್ಧಿಯಾಗಿರಬೇಕು, ಅದೃಷ್ಟ ಲಕ್ಷ್ಮಿ ತಾಂಡವವಾಡಬೇಕು ಎಂಬುದು ಎಲ್ಲರ ಬಯಕೆ. ಹಾಗಿದ್ದರೆ ಅದಕ್ಕೆ ಮಹಾಲಕ್ಷ್ಮಿಯ ಶ್ರೀ ಸೂಕ್ತ ಪೂಜೆ ಮಾಡಿ.
 
ಪ್ರತಿ ದಿವಸ ಬೆಳಿಗ್ಗೆ 5.30 ರಿಂದ 6.30 ರೊಳಗೆ ಶ್ರೀ ಸೂಕ್ತವನ್ನು ಓದಿ, ಶ್ರೀ ಮಹಾಲಕ್ಷ್ಮಿ ದೇವಿಗೆ ಪೂಜೆ ಮಾಡಿ ಸುಮಂಗಲಿಯರಿಗೆ ಅರಿಸಿನ, ಕುಂಕುಮ, ಹೂವು, ತಾಂಬೂಲ, ಕೋಸಂಬರಿ, ಪಾನಕ ಕೊಡುತ್ತಾ ಬಂದರೆ ಆ ಮನೆಯಲ್ಲಿ ಧನಕನಕ, ವಾಹನ, ವಸ್ತ್ರಾದಿಗಳು ಹೆಚ್ಚಿ, ವಂಶಾಭಿವೃದ್ಧಿಯಾಗುತ್ತದೆ.
 
ಶ್ರೀ ಸೂಕ್ತವನ್ನು ಪಾರಾಯಣ ಮಾಡಿ ಧಾನ್ಯ ಪೂಜೆ ಮಾಡಿ, ನೈವೇದ್ರ ಮಾಡಿ, ಹಸುವಿಗೆ, ಸುಮಂಗಲಿಯರಿಗೆ, ಬ್ರಾಹ್ಮಣರಿಗೆ ಕೊಟ್ಟು ಉಳಿದುದನ್ನು ಪ್ರಸಾದ ರೂಪದಲ್ಲಿ ಸೇವಿಸಬೇಕು. ಈ ರೀತಿ ಮಾಡಿದರೆ ಮನೆಯಲ್ಲಿ ನಿತ್ಯ ದಾರಿದ್ರ್ಯ ನಿವಾರಣೆಯಾಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :