Widgets Magazine

ಸರ್ವರಿಗೂ ಅದೃಷ್ಟ ತರುವ ಆ ಸಂಖ್ಯೆ ಯಾವುದು ಗೊತ್ತಾ?

ಬೆಂಗಳೂರು| Krishnaveni K| Last Modified ಗುರುವಾರ, 17 ಜನವರಿ 2019 (09:09 IST)
ಬೆಂಗಳೂರು: ಕೆಲವೊಂದು ಸಂಖ್ಯೆ ಕೆಲವರಿಗೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಆದರೆ ನಂ.7 ಎಂಬುದು ಎಲ್ಲರಿಗೂ ಶುಭ ತರುವ ಸಂಖ್ಯೆ.

 
ಭಾರತೀಯ ಕ್ರಿಕೆಟ್ ನ ಪ್ರಮುಖ ಆಟಗಾರ ಧೋನಿ ತಮ್ಮ ಅದೃಷ್ಟದ ಸಂಖ್ಯೆಯೆಂದು 7 ಸಂಖ್ಯೆಯ ಜೆರ್ಸಿ ತೊಡುವುದನ್ನು ನೀವು ಗಮನಿಸಿರಬಹುದು. ಏಳು ಎಂಬ ಸಂಖ್ಯೆ ಧೋನಿ ಜೀವನದಲ್ಲಿ ಎಷ್ಟು ಲಕ್ಕಿ ಎಂದು ನಾವು ನೋಡಿದ್ದೇವೆ.
 
ಇವರಿಗೆ ಮಾತ್ರವಲ್ಲ, ಸಾಮಾನ್ಯವಾಗಿ ಈ ಸಂಖ್ಯೆಯನ್ನು ಅಳವಡಿಸಿಕೊಳ್ಳುವ ವ್ಯಕ್ತಿಗಳು ಯಾರೇ ಆಗಿದ್ದರೂ ಅದೃಷ್ಟಶಾಲಿಗಳಾಗುತ್ತಾರೆ. ಏಳು ಎಂಬ ಸಂಖ್ಯೆಯ ಸಂಖ್ಯೆಗೆ ಅದರದ್ದೇ ಶಕ್ತಿ, ಸತ್ಯ, ದೈವಿಕ ಶಕ್ತಿಯಿದೆ. ಈ ಸಂಖ್ಯೆ ನಮ್ಮ ಸುತ್ತ ಒಂದು ಧನಾತ್ಮಕ ವಾತಾವರಣ ಸೃಷ್ಟಿಸುತ್ತದೆ. ಹಾಗೂ ಇದು ಯಶಸ್ಸಿಗೆ ದಾರಿ ಮಾಡುತ್ತದೆ.
 
ಜ್ಯೋತಿಷ್ಯದಲ್ಲಿ 7 ಸಂಖ್ಯೆ ಚಂದ್ರನ ಜತೆಗೆ ನೆಪ್ಚ್ಯೂನ್ ಗ್ರಹವನ್ನು ಪ್ರತಿನಿಧಿಸುತ್ತದೆ. ಇದು ಸ್ವತಂತ್ರ ಮತ್ತು ಸಮರ್ಥ ವ್ಯಕ್ತಿತ್ವದ ಸಂಕೇತ.  ಇವರು ಮಾತನಾಡದೇ ಕೆಲಸ ಮಾಡುವುದರಲ್ಲಿ ಹೆಚ್ಚು ನಂಬಿಕೆಯುಳ್ಳವರೂ ಆಗುತ್ತಾರೆ. ಹೀಗಾಗಿ ಯಶಸ್ಸೂ ಇವರನ್ನು ಹಿಂಬಾಲಿಸುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :