ಕರಾಳ ಶಕ್ತಿಯ ನಿವಾರಣೆಗೆ ಉಪ್ಪುನೀರಿನ ಪರಿಹಾರೋಪಾಯ

ಬೆಂಗಳೂರು, ಶನಿವಾರ, 25 ಜೂನ್ 2016 (11:35 IST)

ದೆವ್ವಗಳು( ನಕಾರಾತ್ಮಕ ಶಕ್ತಿಗಳು, ಭೂತಗಳು) ಅವುಗಳಲ್ಲಿರುವ ಕರಾಳ ಶಕ್ತಿಯ ಮೂಲಕ ಸಂಕಷ್ಟವನ್ನು ಉಂಟುಮಾಡುತ್ತವೆ. ಕರಾಳ ಅಥವಾ ನಕಾರಾತ್ಮಕ ಶಕ್ತಿಯು ಖಿನ್ನತೆ, ಅಸ್ಪಷ್ಟ ಆಲೋಚನೆ ಅಥವಾ ಅಂಗಾಂಗಗಳ ಅಸಮರ್ಪಕ ನಿರ್ವಹಣೆ ಮುಂತಾದ ಅನೇಕ ಸಮಸ್ಯೆಗಳನ್ನು ಉಂಟುಮಾಡಿ ಚಟ, ಹಣಕಾಸು ಸಮಸ್ಯೆಗಳು ಅಥವಾ ಎದೆನೋವು ಮುಂತಾದವು ಉದ್ಭವಿಸುತ್ತವೆ. ಉಪ್ಪು ನೀರಿನ ಪರಿಹಾರವು ಸರಳ ಮತ್ತು ಪ್ರಭಾವಶಾಲಿ ಆಧ್ಯಾತ್ಮಿಕ ಪರಿಹಾರವಾಗಿದ್ದು, ಅದೃಶ್ಯ, ಹಾನಿಕರ ಕರಾಳಶಕ್ತಿಯನ್ನು ಎದುರಿಸಿ ಅದನ್ನು ನಮ್ಮ ವ್ಯವಸ್ಥೆಯಿಂದ ಹೀರಿಕೊಳ್ಳುತ್ತದೆ.
 
2. ನಾವು ಉಪ್ಪು ನೀರಿನ ಪರಿಹಾರವನ್ನು ಯಾವಾಗ ಬಳಸಬೇಕು? 
ಪ್ರತಿಯೊಬ್ಬರೂ ಅನೇಕ ಪ್ರಮಾಣದಲ್ಲಿ ಪಿಶಾಚಿಗಳ ಪ್ರಭಾವಕ್ಕೆ ಒಳಗಾಗಿರುತ್ತೇವೆ. ಇದರ ಫಲವಾಗಿ ನಮ್ಮ ದೇಹಗಳಲ್ಲಿ ಒಂದು ರೀತಿಯ ಕರಾಳ ಶಕ್ತಿ ಹರಿದಾಡುತ್ತವೆ.
 
ಉಪ್ಪು ನೀರಿನ ಚಿಕಿತ್ಸೆಯನ್ನು ಕೆಳಗಿನ ಲಕ್ಷಣಗಳನ್ನು ಅನುಭವಿಸಿದಾಗ ಮಾಡಬೇಕಾಗುತ್ತದೆ.
 ಸೋಮಾರಿತನ
ಆಲೋಚಿಸುವಲ್ಲಿ ಅಸಮರ್ಥತೆ
ನಕಾರಾತ್ಮಕ ಸ್ವರೂಪದ ಹೆಚ್ಚೆಚ್ಚು ಯೋಚನೆಗಳು
ಕೋಪ ಅಥವಾ ತೀವ್ರ ಭಾವುಕತೆ
ಮಾನಸಿಕ ಒತ್ತಡ
ಉಪ್ಪ ನೀರಿನ ಪರಿಹಾರಕ್ಕೆ ಬೇಕಾದ ವಸ್ತುಗಳು
 ದೊಡ್ಡ ಗಾತ್ರದ ಬಕೆಟ್, ಅರ್ಧದಷ್ಟು ನೀರಿನಿಂದ ಕೂಡಿರಬೇಕು. ಪಾದಗಳು ಬಕೆಟ್‌ನಲ್ಲಿ ಮುಳುಗಿರಬೇಕು
ಕಲ್ಲುಪ್ಪು ಸಿಗದಿದ್ದರೆ ಉಪ್ಪಿನ ಹರಳು, ಉಪ್ಪಿನ ಪುಡಿ ಬಳಸಬಹುದು. ಆದರೆ ಪರಿಣಾಮ ಮಾತ್ರ ಶೇ. 30ರಷ್ಟು ಕಡಿಮೆಯಾಗುತ್ತದೆ.  ಒಂದು ಟವಲ್ ಮತ್ತು ಫುಟ್ ಮ್ಯಾಟ್.
 
ಬಕೆಟ್‌ಗೆ ಅರ್ಧದಷ್ಟು ನೀರನ್ನು ಎರಡು ಪಾದಗಳು ಮುಚ್ಚುವಂತೆ ಮುಚ್ಚಿ. 2 ಟೇಬರ್ ಸ್ಪೂನ್ ಕಲ್ಲುಪ್ಪನ್ನು ಹಾಕಿ.
ದೇವರಿಗೆ ನಿಮ್ಮಲ್ಲಿರುವ ಕರಾಳ ಶಕ್ತಿಯನ್ನು ತೆಗೆಯುವಂತೆ ನಿಷ್ಠೆಯಿಂದ ಪ್ರಾರ್ಥಿಸಿ. ನಿಮ್ಮ ಮೇಲೆ ಪರಿಣಾಮ ಬೀರುತ್ತಿರುವ ಪಿಶಾಚಿಗಳ ಕರಾಳ ಶಕ್ತಿಗಳ ನಾಶಕ್ಕೆ ಪ್ರಾರ್ಥಿಸಿ.
ನಿಮ್ಮ ಪಾದಗಳನ್ನು ಉಪ್ಪು ನೀರಿನ ಬಕೆಟ್‌ನಲ್ಲಿ ಊರಿ ನೇರವಾಗಿ ಕುಳಿತುಕೊಳ್ಳಿ, ಪಾದಗಳ ನಡುವೆ 2-3 ಸೆಂಮೀ ಅಂತರ ಬಿಡಿ. ಇದರಿಂದ ಕರಾಳ ಶಕ್ತಿ ಹೊರಹೋಗಲು ನೆರವಾಗುತ್ತದೆ.
 
10-15 ನಿಮಿಷಗಳ ಕಾಲ ಪಾದಗಳನ್ನು ಮುಳುಗಿಸಿಡಿ. ನಿಮ್ಮ ಧರ್ಮಕ್ಕೆ ಅನುಗುಣವಾಗಿ ದೇವರ ಹೆಸರನ್ನು ಜಪಿಸಿ.
ಈ ಪರಿಹಾರೋಪಾಯ ಮುಗಿದ ಬಳಿಕ ದೇವರಿಗೆ ಕೃತಜ್ಞತೆ ಸಲ್ಲಿಸಿ ಮತ್ತು ನಿಮ್ಮ ಸುತ್ತ ರಕ್ಷಣಾತ್ಮಕ ಕವಚವನ್ನು ಸೃಷ್ಟಿಸುವಂತೆ ಪ್ರಾರ್ಥಿಸಿ. ಬಳಿಕ ಉಪ್ಪುನೀರನ್ನು ಶೌಚಾಲಯದಲ್ಲಿ ಸುರಿದು ಶುದ್ಧ ನೀರಿನಿಂದ ಬಕೆಟ್ ಸ್ವಚ್ಛಮಾಡಿ. 2-3 ನಿಮಿಷಗಳ ಕಾಲ ದೇವರ ಹೆಸರನ್ನು ಜಪಿಸಿ.
 
 ಉಪ್ಪು ನೀರಿನ ಪರಿಹಾರದ ಬಳಿಕ ಬಕೆಟ್‌ನಲ್ಲಿರುವ ನೀರು ಕೆಟ್ಟ ವಾಸನೆ ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದು ದೇಹದಿಂದ ಕರಾಳ ತರಂಗಗಳು ಹೊರಹೋಗಿ ನೀರಿಗೆ ಸೇರುವುದರಿಂದ ನೀರು ಆ ಬಣ್ಣಕ್ಕೆ ತಿರುಗುತ್ತದೆ.

 ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿಗೆ 8 ಪರಿಹಾರೋಪಾಯಗಳು

ದುರ್ಬಲ ಶುಕ್ರ ಮತ್ತು ಗುರುವಿನಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ನಿಮ್ಮ ವೈವಾಹಿಕ ...

news

ಅದೃಷ್ಟ ಖುಲಾಯಿಸಲು ಕೆಲವು ಟಿಪ್ಸ್‌ಗಳು

ಈ ಜಗತ್ತಿನಲ್ಲಿ ವ್ಯಕ್ತಿಯೊಬ್ಬ ಪ್ರಾಮಾಣಿಕವಾಗಿ ಶ್ರಮಿಸಿ ಸತತವಾಗಿ ದುಡಿದರೆ ಯಾವುದನ್ನಾದರೂ ಸಾಧಿಸಬಹುದು ...

news

ಪ್ರೇಮ ವಿವಾಹಕ್ಕೆ ಜ್ಯೋತಿಷ್ಯದ ಪರಿಹಾರೋಪಾಯಗಳು

ನೀವು ಯಾರನ್ನಾದರೂ ಪ್ರೀತಿಸುತ್ತಿದ್ದು ಅವರನ್ನು ಮದುವೆಯಾಗಲು ಬಯಸಿದ್ದರೂ ಪ್ರೇಮ ವಿವಾಹಕ್ಕೆ ಅನೇಕ ...

news

ಸಿಂಹ ರಾಶಿಯ ಮಕ್ಕಳ ಸ್ವಭಾವ ಹೇಗಿರುತ್ತೆ?

ಸಿಂಹ ರಾಶಿಯ ಮಕ್ಕಳು ಯಾವಾಗಲೂ ಗುಂಪಿನಲ್ಲಿ ನಾಯಕರಾಗಿರುತ್ತಾರೆ. ಅದು ಆಟದ ಮೈದಾನದಲ್ಲಿರಬಹುದು, ಅಥವಾ ...