ಪ್ರೇಮ ವಿವಾಹ ಯಾಕೆ ಸಫಲವಾಗುವುದಿಲ್ಲ?: ಉತ್ತರ ಇಲ್ಲಿದೆ ನೋಡಿ

ಸೋಮವಾರ, 26 ಸೆಪ್ಟಂಬರ್ 2016 (16:56 IST)

ಪ್ರೀತಿ. ಯಾರಿಗೆ ಆಗುವುದಿಲ್ಲ ಹೇಳಿ. ಇಂತಹ ಪ್ರೀತಿಯ ಬಗ್ಗೆ, ಪ್ರೇಮ ವಿವಾಹದ ಬಗ್ಗೆ ಜ್ಯೋತಿಷ್ಯದಲ್ಲೂ ಕೆಲವಾರು ವಿವರಗಳು ಸಿಗುತ್ತವೆ.
ವರ್ತಮಾನದ ಆಧುನಿಕತೆ ಪ್ರವೇಶ, ಬಿಚ್ಚುಸಂಸ್ಕೃತಿ, ಟಿವಿ, ಸಿನಿಮಾ, ವ್ಯಾಲೆಂಟೈನ್ ಡೇ... ನಮ್ಮ ಸಂಸ್ಕೃತಿ ಹಲವನ್ನು ಒಳಗೊಂಡು ಮುಂದೆ ಹೋಗುತ್ತಲೇ ಇದೆ. ಹೀಗಾಗಿ ಪ್ರೀತಿ, ಪ್ರೇಮಗಳ ಪ್ರಕರಣಗಳೂ ಹೆಚ್ಚಾಗುತ್ತಲೇ ಇವೆ. ಜತೆಗೆ ಬೆಳೆದಂತೆಯೇ ವಿಚ್ಚೇದನವೂ ಹೆಚ್ಚಾಗುತ್ತಲೇ ಇವೆ.
 
ಯಾವ ಗ್ರಹಗಳ ಕಾರಣದಿಂದ ವ್ಯಕ್ತಿಯೊಬ್ಬ ಪ್ರೇಮಕ್ಕೆ ಬೀಳುತ್ತಾನೋ.. ಅದೇ ಗ್ರಹಗಳ ಕಾರಣದಿಂದಲೇ ಆ ವ್ಯಕ್ತಿ ತನ್ನ ಪ್ರೇಮದಲ್ಲಿ ವಿಫಲನೂ/ಳೂ ಆಗುತ್ತಾನೆ/ಳೆ ಎಂಬುದು ಜ್ಯೋತಿಷ್ಯದ ವಿಶೇಷ ಕುತೂಹಲಕರ ವಿಷಯ. ಪ್ರೇಮ ವಿವಾಹಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಸ್ಪಷ್ಟ ವಿವರಗಳು ಸಿಗದಿದ್ದರೂ, ಪ್ರೇಮ ವಿವಾಹ ಯಾಕೆ ಸಫಲವಾಗುವುದು ಕಡಿಮೆ ಎಂಬುದಕ್ಕೆ ಹಲವು ಕಾರಣಗಳು ಸಿಗುತ್ತವೆ.
 
1. ಶುಕ್ರ ಅಥವಾ ಮಂಗಳನ ಸ್ಥಿತಿ ಪ್ರೇಮ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಯವುದೇ ಜಾತಕದ ಕುಂಡಲಿಯಲ್ಲಿ ಶುಕ್ರ ಹಾಗೂ ಮಂಗಳ ಅನುಕೂಲ ಸ್ಥಿತಿಯಲ್ಲಿ ಇಲ್ಲದಿದ್ದರೆ, ಪ್ರೇಮ ಸಂಬಂಧದಲ್ಲಿ ಪ್ರತಿಕೂಲ ಪರಿಸ್ಥಿತಿ ಉಂಟಾಗುತ್ತದೆ. ಅಂದರೆ ಪ್ರೇಮ ವಿಫಲವಾಗಿ ನೋವಿನಲ್ಲಿ ನರಳಬೇಕಾಗುತ್ತದೆ.
 
 2. ಸಪ್ತಮ ಭಾವ ಅಥವಾ ಸಪ್ತಮೇಶದ ಪಾಪ ಪೀಡಿತನಾದರೂ ಪ್ರೇಮ ವಿಫಲವಾಗುತ್ತದೆ. ಅಂದರೆ ಸಪ್ತಮೇಶ ಹಾಗೂ ಪಂಚಮೇಶಗಳ ಸ್ಥಿತಿ ಸಪ್ತಮ ಹಾಗೂ ಪಂಚಮದ ಜತೆ ಸಂಬಂಧ ಹೊಂದಿರದಿದ್ದಲ್ಲಿ ಪ್ರೇಮದಲ್ಲಿ ವಿರಸ ಉಂಟಾಗುತ್ತದೆ.
 
3. ಸೂರ್ಯನಲ್ಲಿರುವ ಶುಕ್ರನ ಮೇಲೆ ಚಂದ್ರನ ಪ್ರಭಾವವಿದ್ದರೆ ಪ್ರೇಮ ಸಂಬಂಧ ಮದುವೆಯವರೆಗೆ ತಲುಪಿದರೂ ಮದುವೆಯ ನಂತರ ವಿಚ್ಚೇದನದಲ್ಲೇ ಅಂತ್ಯವಾಗುತ್ತದೆ. ಸೂರ್ಯ ಹಾಗೂ ಚಂದ್ರನ ಮಧ್ಯೆ ಶುಕ್ರ ಬಂದಲ್ಲಿ ಅದು ಪ್ರೇಮದ ಅವಸಾನ ಎಂದೇ ಅರ್ಥ.
 
4. ಪ್ರೇಮವಿವಾಹಕ್ಕಾಗಿ ಜನ್ಮ ಕುಂಡಲಿಯಲ್ಲಿ ಮೊದಲು ಐದನೇ ಸಪ್ತಮ ಭಾವದ ಜತೆ ಜತೆಗೆ 12ನೇ ಭಾವವನ್ನೂ ನೋಡಬೇಕು. ಯಾಕೆಂದರೆ ಮದುವೆಯ ಸಮದಲ್ಲಿ 12ನೇ ಮನೆ ಶಯನ ಸುಖದ ಭಾವವಾದ್ದರಿಂದ ಅದ್ನನೂ ಮದುವೆಯ ಸಮಯ ಕುಂಡಲಿ ಹೊಂದಣಿಕೆಯ ಸಮಯದಲ್ಲಿ ನೋಡುತ್ತಾರೆ. ಇದರಲ್ಲೂ ತೊಂದರೆಯಿದ್ದರೆ ವಿವಾಹ ನಂತರ ವಿರಸದಲ್ಲಿ ಅಂತ್ಯವಾಗುವ ಸಂಭವಗಳಿವೆ.
 
ಪ್ರೇಮ ವಿವಾಹ ಚೆನ್ನಾಗಿರಬೇಕಾದರೂ ಜ್ಯೋತಿಷ್ಯದಲ್ಲಿ ಸಾಕಷ್ಟು ಸೂತ್ರಗಳಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ನಿಮ್ಮ ಮದುವೆ ಯಾವಾಗ ಆಗುತ್ತೆ ಗೊತ್ತಾ ? ಕನಸಿನಿಂದ ತಿಳಿದುಕೊಳ್ಳಿ

ಕನಸಿನಲ್ಲಿ ಕಸೂತಿ ಬಟ್ಟೆಗಳು ಕಂಡರೆ, ನಿಮಗೆ ಸುಂದರವಾದ ಮತ್ತು ಪವಿತ್ರ ಹುಡುಗಿ/ಹುಡುಗನ ಜೊತೆಗೆ ...

news

ವಿವಾಹ ನೆರವೇರಿಸಲು ಮುಹೂರ್ತಗಳಿಲ್ಲ ಎನ್ನುವುದು ಉಹಾಪೋಹ

ಸುಮಾರು 2 ತಿಂಗಳು ಶುಭಕಾರ್ಯಗಳನ್ನು ಮಾಡಲು ಮುಹೂರ್ತಗಳಿಲ್ಲವೆಂದು ಕೆಲವು ಪುರೋಹಿತರು ಹಾಗೂ ಜ್ಯೋತಿಷ್ಯರು ...

news

ವೃಷಭರಾಶಿಗೆ ಗುರು ಪ್ರವೇಶವಾಗಲಿದೆ, ನಿಮ್ಮ ರಾಶಿಗಳಲ್ಲಿ ಗ್ರಹಗತಿ ಹೇಗಿದೆ ಗೊತ್ತಾ?

ಗ್ರಹಗಳಲ್ಲಿ ಹೆಚ್ಚು ಶುಭಫಲ ನೀಡುವ ಗ್ರಹ ಗುರು. ಗುರುವಿಗೆ ಅರ್ಥವತ್ತಾದ ಶಬ್ದವೆಂದರೆ ವಿಕಾಸ ಅಥವಾ ...

news

ಸಿಂಹ ರಾಶಿಯವರು ತಮ್ಮ ನಿಜ ಜೀವನದಲ್ಲಿ ಹೇಗಿರುತ್ತಾರೆ ಗೊತ್ತಾ?

ಮಕ್ಕಳು: ಸಿಂಹ ರಾಶಿಯ ಮಕ್ಕಳು ಯಾವಾಗಲೂ ಗುಂಪಿನಲ್ಲಿ ನಾಯಕರಾಗಿರುತ್ತಾರೆ. ಅದು ಆಟದ ಮೈದಾನದಲ್ಲಿರಬಹುದು, ...