ಸುಕ್ಕು ರಹಿತ ಚರ್ಮಕ್ಕಾಗಿ ಸೆಲ್ಫಿಲ್ ಪ್ಲಾಸ್ಮಾ ಫೇಸ್‌ಲಿಫ್ಟ್

ಶನಿವಾರ, 25 ಜನವರಿ 2014 (12:40 IST)

PR
ಬೆಂಗಳೂರು: ಅಯ್ಯೋ, ನನ್ ಮುಖ ಸುಕ್ಕುಗಟ್ಟಿದೆ. ಎಲ್ಲರ ಮುಂದೆ ಮುಖ ಎತ್ತಿ ನಡೆಯೋದು ಹೇಗೆ ಎಂಬ ಆತಂಕ ನಿಮ್ಮನ್ನು ಕಾಡುತ್ತಿದೆಯೇ. ಹಾಗಾದ್ರೆ ಇನ್ನು ಮುಂದೆ ಈ ಚಿಂತೆ ಬೇಡ. ಸುಕ್ಕುಗಟ್ಟಿದ ಚರ್ಮದ ನಿವಾರಣೆಗಾಗಿ ಬೆಂಗಳೂರಿಗರಿಗಾಗಿ ಹೇರ್ ಲೈನ್ ಇಂಟರ್ ನ್ಯಾಷನಲ್ ಸೆಲ್ಫಿಲ್ ಪ್ಲಾಸ್ಮಾ ಫೇಸ್‌ಲಿಫ್ಟ್ ಎಂಬ ಇಂಜೆಕ್ಷನ್ ಅನ್ನು ಕೊಡುಗೆಯಾಗಿ ನೀಡಿದೆ.

ಸೆಲ್ಫಿಲ್ ಪ್ಲಾಸ್ಮಾ ಫೇಸ್ ಲಿಫ್ಟ್ ಯಾಕೆ, ಹೇಗೆ..?

ಶಸ್ತ್ರಚಿಕಿತ್ಸೆ ಇಲ್ಲದೆಯೇ ಸುಕ್ಕು ನಿವಾರಣೆ ಮಾಡಬಹುದು ಎನ್ನುವುದು ಸೆಲ್ಫಿಲ್ ವಿಶೇಷ. ರೋಗಿಯ ರಕ್ತದ ಮಾದರಿಯಿಂದ ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮಾ (ಪಿಆರ್‌ಪಿ) ತೆಗೆಯುತ್ತಾರೆ. ಆಧುನಿಕ ತಂತ್ರಜ್ಞಾನ ಬಳಸಿ ಪಿಆರ್‌ಪಿಯನ್ನು ಚುಚ್ಚುಮದ್ದಿಗೆ ಬಳಸುವ ಜೆಲ್ ರೂಪಕ್ಕೆ ಮಾರ್ಪಾಡು ಮಾಡುತ್ತದೆ. ಇದನ್ನು ಮುಖ, ಕುತ್ತಿಗೆ ಅಥವಾ ಸುಕ್ಕುಗಟ್ಟಿದ ಜಾಗಕ್ಕೆ ಇಂಜೆಕ್ಷನ್ ರೂಪದಲ್ಲಿ ನೀಡುತ್ತಾರೆ. ಇದು ನಿಮ್ಮ ಚರ್ಮದ ಸುಕ್ಕನ್ನು ಮರೆಮಾಚಿ ನಿಮಗೆ ಕಾಂತಿ ನೀಡುತ್ತದೆ.

ಸೆಲ್ಫಿಲ್ ಪ್ಲಾಸ್ಮಾ ಫೇಸ್ ಲಿಫ್ಟ್ ಇಂಜೆಕ್ಷನ್ ಕಣ್ಣು, ತುಟಿ, ಮೂಗು ಹಾಗೂ ಹಣೆಯ ಭಾಗದ ಸುಕ್ಕು ನಿವಾರಣೆಗೆ ಸಹಕಾರಿ ಎನ್ನುತ್ತಾರೆ ಹೇರ್‌ಲೈನ್ ಇಂಟರ್‌ನ್ಯಾಷನಲ್ ರಿಸರ್ಚ್ ಆಂಡ್ ಟ್ರೀಟ್‌ಮೆಂಟ್ ಸೆಂಟರ್‌ನ ಡರ್ಮಟೋಸರ್ಜನ್ ಹಾಗೂ ಹೇರ್ ಟ್ರಾನ್ಸ್‌ಪ್ಲಾಂಟ್ ಸ್ಪೆಷಲಿಸ್ಟ್ ಡಾ.ದಿನೇಶ್ ಗೌಡ. ಅಲ್ಲದೆ ಇದನ್ನು ಮುಖದ ಉಬ್ಬು ತಗ್ಗುಗಳನ್ನು ದುಂಡಗಾಗಿಸಲು ಬಳಸುತ್ತಾರೆ. ಚರ್ಮವನ್ನು ಬಲಪಡಿಸಲು ಈ ಪ್ರಕ್ರಿಯೆ ಸಹಕಾರಿಯಾಗಲಿದೆ ಎನ್ನುವುದು ಡಾ.ಗೌಡ ಅವರ ಅಭಿಪ್ರಾಯ.

ರೋಗಿಯ ಶರೀರದಿಂದ ೫ ಮಿಲಿ ಲೀಟರ್ ರಕ್ತವನ್ನು ಪಡೆದು ಪಿಆರ್‌ಪಿಯನ್ನು ಬಲಪಡಿಸಲಾಗುತ್ತದೆ. ಪಿಆರ್‌ಪಿಯು ಪ್ಲೇಟ್‌ಲೆಟ್ ಜೊತೆಗೆ ಮಾನವನ ಬೆಳವಣಿಗೆಗೆ ಸಹಕಾರಿಯಾದ ಫೈಬ್ರಿನ್ ಮತ್ತು ಫೈಬ್ರೋನೆಕ್ಟಿನ್ ಅನ್ನು ಒಳಗೊಂಡಿರುತ್ತದೆ ಎನ್ನುವುದೂ ವಿಶೇಷ.

ಸೆಲ್ಫಿಲ್ ಪ್ಲಾಸ್ಮಾ ಫೇಸ್‌ಲಿಫ್ಟ್ ಚರ್ಮದ ಪುನರ್ ಸೃಷ್ಟಿಸುವ ಸುಧಾರಿತ ಚಿಕಿತ್ಸೆ ಎಂದು ಹೇರ್‌ಲೈನ್ ಇಂಟರ್‌ನ್ಯಾಷನಲ್ ರಿಸರ್ಚ್ ಆಂಡ್ ಟ್ರೀಟ್‌ಮೆಂಟ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಂಸ್ಥಾಪಕರಾಗಿರುವ ಬಾನಿ ಆನಂದ್ ಹೇಳುತ್ತಾರೆ. ಪ್ಲೇಟ್‌ಲೆಟ್ ಹಾಗೂ ಬಿಳಿ ರಕ್ತಕಣ (ಡಬ್ಲ್ಯೂಬಿಸಿ) ಚರ್ಮದ ಪದರ ಬೆಳವಣಿಗೆಗೆ ಸಹಕಾರಿ. ಅಲ್ಲದೆ ಸೆಲ್ಫಿಲ್‌ನಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎನ್ನುತ್ತಾರೆ.

ಸೆಲ್ಫಿಲ್ ಚಿಕಿತ್ಸೆಯನ್ನು ತಿಂಗಳಿಗೆ ಒಂದು ಬಾರಿಯಂತೆ ಮೂರು ತಿಂಗಳು ನೀಡುತ್ತಾರೆ. ಒಂದು ಬಾರಿ ನೀವು ಈ ಚಿಕಿತ್ಸೆ ಪಡೆದರೆ ನಿಮ್ಮ ಚರ್ಮದ ತಾಜಾತನ ಒಂದೂವರೆ ವರ್ಷದಿಂದ ಮೂರು ವರ್ಷದವರೆಗೂ ಹಾಗೆಯೇ ಇರುತ್ತದೆ ಎನ್ನುವುದು ಇಲ್ಲಿ ಗಮನಾರ್ಹ.

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ: ೦೮೦-೨೩೫೫೧೧೭೭ ಅಥವಾ ೦೮೦-೪೦೯೧೪೭೬೭

ವೆಬ್‌ಸೈಟ್ ವಿಳಾಸ: www.hairline.inಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

ಮಹಿಳೆಯರಿಗೆ ಎಂತಹ ಪುರುಷರು ಇಷ್ಟವಾಗುತ್ತಾರೆ ಗೊತ್ತಾ ?

ಆಚಾರ್ಯ ವಾತ್ಸಾಯನ ರಚಿತ ಕಾಮಸೂತ್ರ ಪುಸ್ತಕದಲ್ಲಿ ಮಹಿಳೆಯರು ಎಂತಹ ಪುರುಷರನ್ನು ಇಷ್ಟಪಡುತ್ತಾರೆಂದು ...

ಸೌಂದರ್ಯದಿಂದ ಕಂಗೊಳಿಸಲು ಚರ್ಮದ ರಕ್ಷಣೆಗೆ - ಒಂದಷ್ಟು ಸಲಹೆಗಳು

ಸೌಂದರ್ಯ ಎಂಬುದು ಚರ್ಮದಲ್ಲಿ ಅಡಗಿದೆ ಎಂಬ ಮಾತು ಜೀವನವನ್ನು ತಾತ್ವಿಕತೆಯೊಂದಿಗೆ ಥಳುಕು ಹಾಕಲು ಹಲವಾರು ...

ನಿಮ್ಮ ಮದುವೆಯ ಕ್ಷಣಗಳ ಪರಿಪೂರ್ಣ ಅಂದಕ್ಕೆ ಯಾವುದೂ ಸರಿಸಾಟಿಯಲ್ಲ-ಏನು ಮಾಡಿದರು ಅತಿಯಲ್ಲ

ಮದುವೆ ಸುಗ್ಗಿಯ ಭರಾಟೆ ತಾರಕಕ್ಕೇರುತ್ತಿದ್ದಂತೆಯೇ , ಅದರ ಜೊತೆ ಸಲೋನ್ ಮತ್ತು ಬ್ಯೂಟಿ ಪಾರ್ಲರ್‌ಗಳಿಗೂ ...

ಮುಖದ ಸೌಂದರ್ಯಕ್ಕೆ ನಿಮ್ಮ ಅಡುಗೆ ಮನೆಯಲ್ಲೇ ಪರಿಹಾರ!

ಅಂದದ ಮುಖದ ಕನಸು ಕಾಣದವರಿಲ್ಲ. ಆದರೂ, ಏನೇ ಮಾಡಿದರೂ, ಮೊಡವೆ, ಕಪ್ಪು ಕಲೆ, ಕಳಾಹೀನ ಮುಖ... ಹೀಗೆ ಒಂದೇ, ...

Widgets Magazine
Widgets Magazine