ಕೂದಲು ಉದುರುವಿಕೆ ಸಮಸ್ಯೆ ಕಾಡುತ್ತಿದೆಯಾ…? ಹಾಗಾದ್ರೆ ಈರುಳ್ಳಿ ರಸ ಹಚ್ಚಿಕೊಳ್ಳಿ!

ಬೆಂಗಳೂರು, ಶುಕ್ರವಾರ, 16 ಮಾರ್ಚ್ 2018 (11:44 IST)

ಬೆಂಗಳೂರು: ಕೂದಲುದುರುವ ಸಮಸ್ಯೆ ಎಲ್ಲರಲ್ಲೂ ಕಾಡುತ್ತೆ. ಧೂಳು, ಕಲುಷಿತ ಆಹಾರ, ಪೋಷಕಾಂಶ ರಹಿತವಾದ ಆಹಾರ ಸೇರಿದಂತೆ ಇಂದು ಅನೇಕರು ಈ ಸಮಸ್ಯೆಯನ್ನು ಎದುರಿಸುತ್ತಾರೆ. ಕೂದಲು ಉದುರುವಿಕೆಯನ್ನು ತಪ್ಪಿಸಲು ಇಂದು ಹಲವಾರು ಶ್ಯಾಂಪೂ, ಎಣ್ಣೆಗಳಿಗೆ ದುಡ್ಡು ಸುರಿಯುತ್ತಾರೆ.ಮನೆಯಲ್ಲಿಯೇ ಇರುವ ಈರುಳ್ಳಿಯನ್ನು ಉಪಯೋಗಿಸಿಕೊಂಡು ಈ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿಕೊಳ್ಳಬಹುದು, ಅದು ಹೇಗೆ ಎಂಬುದರ ಕುರಿತು ಇಲ್ಲಿದೆ ನೋಡಿ ಮಾಹಿತಿ.

ಈರುಳ್ಳಿ ರಸ
ನೆತ್ತಿಯ ಮೇಲೆ ಈರುಳ್ಳಿ ರಸವನ್ನು ಅನ್ವಯಿಸುವುದರಿಂದ ಕೂದಲು ಉದುರುವುದನ್ನು ತಪ್ಪಿಸಿ ಚೆನ್ನಾಗಿ ಬೆಳೆಯಲು ಸಹಕಾರಿಯಾಗಿದೆ.
ಒಂದು ಚಮಚ ಈರುಳ್ಳಿ ರಸವನ್ನು ಹತ್ತಿಯಲ್ಲಿ ಅದ್ದಿ ಅದರಿಂದ ಕೂದಲಿನ ಬುಡಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಸ್ವಲ್ಪ ಸಮಯದ ನಂತರ ಶಾಂಪೂವಿನಿಂದ ಕೂದಲು ತೊಳೆಯಿರಿ ಇದರಿಂದ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ.


ಈರುಳ್ಳಿ ಹಾಗೂ ಹರಳೆಣ್ಣೆ
ಹರಳೆಣ್ಣೆ ಕೂಡ ಕೂದಲು ಉದುರುವಿಕೆ ಸಮಸ್ಯೆ ನಿವಾರಿಸುತ್ತದೆ. ಸೊಂಪಾದ ಕೂದಲು ಬೆಳಯಲು ಹರಳೆಣ್ಣೆ ಕೂಡ ಸಹಕಾರಿ.
ಎರಡು ಚಮಚ ಈರುಳ್ಳಿ ರಸ, ಎರಡು ಚಮಚ ಹರಳೆಣ್ಣೆ ಮಿಶ್ರ ಮಾಡಿಕೊಂಡು ಕೂದಲಿನ ಬುಡಕ್ಕೆ ಹಚ್ಚಿ. ಒಂದು ಗಂಟೆಯ ನಂತರ ಶಾಂಪೂವಿನಿಂದ ತಲೆಸ್ನಾನ  ಮಾಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ವಯಸ್ಸಾಗುವಿಕೆ ತಡೆಯಲು ಇಲ್ಲಿದೆ ಉಪಾಯ!

ಬೆಂಗಳೂರು: ನಾವು ಸೇವಿಸುವ ಆಹಾರಕ್ಕೆ ತಕ್ಕಂತೆ ನಮ್ಮ ಆಯಸ್ಸು, ಆರೋಗ್ಯ ಅಡಗಿದೆ ಎನ್ನುವುದು ಎಲ್ಲರಿಗೂ ...

news

ಹೆಂಗಳೆಯರೇ ಗುಲಾಬಿ ರಂಗಿನ ತುಟಿ ನಿಮ್ಮದಾಗಬೇಕೆ ಇಲ್ಲಿದೆ ನೋಡಿ ಸುಲಭ ಟಿಪ್ಸ್!

ಬೆಂಗಳೂರು: ಹೆಣ್ಣುಮಕ್ಕಳಿಗೆ ತಮ್ಮ ತುಟಿಗೆ ಎಷ್ಟೇ ಆರೈಕೆ ಮಾಡಿದರೂ ಕಡಿಮೆ ಅನಿಸುತ್ತೆ. ಗುಲಾಬಿ ರಂಗಿನ ...

news

ತುಟಿ ಒಡೆಯುವುದಕ್ಕೆ ಲಿಪ್ ಬಾಮ್ ಹಚ್ಚಿ ನಿರಾಸೆಯಾಗೊಂಡಿದ್ದೀರಾ? ಹಾಗಿದ್ದರೆ ಈ ಟ್ರಿಕ್ ಮಾಡಿ ನೋಡಿ

ಬೆಂಗಳೂರು: ತುಟಿ ಒಡೆಯುವುದಕ್ಕೆ ಹೆಚ್ಚಾಗಿ ನಾವು ಮಾಡುವ ಮನೆ ಮದ್ದು ಎಂದರೆ ಲಿಪ್ ಬಾಮ್, ಲಿಪ್ ಕೇರ್ ನಂತಹ ...

news

ಮುಖದ ಅಂದಕ್ಕಿರಲಿ ಪಪ್ಪಾಯ ಹಣ್ಣಿನ ಸಾಥ್

ಬೆಂಗಳೂರು: ಪಪ್ಪಾಯ ಹಣ್ಣು ದೇಹಕ್ಕೂ ಹಿತಕರ. ಹಾಗೇ ಮುಖದ ಸೌಂದರ್ಯಕ್ಕೂ ಮದ್ದು. ಬ್ಯೂಟಿಪಾರ್ಲರ್ ಗೆ ಹೋಗಿ ...

Widgets Magazine