ಬೆಂಗಳೂರು: ತೂಕ ಕಳೆದುಕೊಳ್ಳಲು ಬಯಸುವವರು ಚಪಾತಿ ತಿನ್ನಬೇಕಾ? ಅನ್ನ ಸೇವಿಸಬೇಕಾ? ಹೀಗೊಂದು ಅನುಮಾನವಿದ್ದರೆ ಈ ಲೇಖನ ಓದಿ. ಎರಡರಲ್ಲೂ ಕಾರ್ಬೋ ಹೈಡ್ರೇಟ್ ಮತ್ತು ಫೈರ್ ಅಂಶ ಹೆಚ್ಚಿರುತ್ತದೆ. ಎರಡೂ ಜೀರ್ಣವಾಗುವುದು ಸುಲಭ. ಆದರೆ ಪೋಷಕಾಂಶಗಳ ವಿಷಯಕ್ಕೆ ಬಂದರೆ ಚಪಾತಿಯಲ್ಲಿ ಇದು ಹೇರಳವಾಗಿರುತ್ತದೆ.ಪೋಷಕಾಂಶಗಳ ವಿಚಾರದಲ್ಲಿ ಚಪಾತಿಗೆ ಒಂದು ಅಂಕ ಹೆಚ್ಚು. ಆದರೆ ಇದರಲ್ಲಿ ಸೋಡಿಯಂ ಅಂಶ ಹೆಚ್ಚು. ಹಾಗಾಗಿ ಸೋಡಿಯಂ ಅಂಶ ಬೇಡದೇ ಇದ್ದವರು ಚಪಾತಿ ತಿನ್ನದೇ ಇರುವುದೇ ಒಳ್ಳೆಯದು.