ಸುಂದರ ಮುಖಕ್ಕಾಗಿ ಬಳಸಿ ಮೊಸರಿನ ಫೇಸ್ ಪ್ಯಾಕ್

ಬೆಂಗಳೂರು, ಮಂಗಳವಾರ, 28 ಆಗಸ್ಟ್ 2018 (14:12 IST)

ಮೊಸರಿನಲ್ಲಿರುವ ಹೆಚ್ಚಿನ ಪ್ರೊಟೀನ್, ವಿಟಮಿನ್ ಮತ್ತು ಮಿನರಲ್‌ಗಳು ನಿಮ್ಮ ತ್ವಚೆಯನ್ನು ತಾಜಾ ಆಗಿರಿಸುವಲ್ಲಿ ಹೆಚ್ಚು ಮಹತ್ವದ ಪಾತ್ರವನ್ನು ವಹಿಸುತ್ತದೆ. ಮೊಡವೆ, ಕಪ್ಪು ಕಲೆಗಳು, ಗುಳ್ಳೆಗಳು ಹೀಗೆ ಹಲವು ರೀತಿಯ ಸಮಸ್ಯೆಗಳನ್ನು ದೂರಮಾಡುತ್ತದೆ ಮತ್ತು ನಿಮ್ಮ ಮುಖವನ್ನು ಮಾಯಿಶ್ಚರೈಸ್ ಮಾಡುತ್ತದೆ ಮತ್ತು ದೀರ್ಘ ಸಮಯದವರೆಗೆ ಹೈಡ್ರೇಟ್ ಆಗಿ ಇರಿಸುತ್ತದೆ
ಬೇವು ಮೊಸರಿನ ಪ್ಯಾಕ್
 
- 8 ಬೇವಿನ ಎಲೆಗಳನ್ನು ಮೊಸರಿನ ಜೊತೆಗೆ ಸೇರಿಸಿ ರುಬ್ಬಿ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದು ಮುಖದ ಧೂಳು-ಕೊಳೆಯನ್ನು ಹೋಗಲಾಡಿಸುತ್ತದೆ.
 
ಕಡಲೆಹಿಟ್ಟು ಮೊಸರ ಪ್ಯಾಕ್
 
- ಕಡಲೆಹಿಟ್ಟು, ಮೊಸರನ್ನು ಸೇರಿಸಿ ಪ್ಯಾಕ್‌ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷದ ವರೆಗೆ ಸ್ಕ್ರಬ್‌ ಮಾಡುತ್ತಿರಿ. ನಂತರ ನೀರಿನಿಂದ ತೊಳೆಯಿರಿ.
 
 
ಟೊಮ್ಯಾಟೋ ಮೊಸರಿನ ಪ್ಯಾಕ್
 
- ಚೆನ್ನಾಗಿ ಪೇಸ್ಟ್ ಮಾಡಿದ ಟೊಮ್ಯಾಟೋಗೆ ಸ್ವಲ್ಪ ಮೊಸರು ಸೇರಿಸಿ. ಒಂದೆರಡು ಹನಿ ರೋಸ್ ವಾಟರ್ ಸೇರಿಸಿ ಮುಖಕ್ಕೆ ಈ ಮಿಶ್ರಣ ಹಚ್ಚಿ. 15 ನಿಮಿಷ ಬಿಟ್ಟು ತೊಳೆಯಿರಿ.
 
ಶ್ರೀಗಂಧ ಮೊಸರಿನ ಫೇಸ್ ಪ್ಯಾಕ್
 
- 1 ಚಮಚ ಶ್ರೀಗಂಧದ ಪುಡಿಗೆ 1 ಚಮಚ ಮೊಸರು ಮತ್ತು 1/2 ಚಮಚ ಜೇನುತುಪ್ಪ ಬೆರಸಿ, ಮುಖಕ್ಕೆ ಹಚ್ಚಿಕೊಳ್ಳಿ.
 
ಮೊಸರು ಜೇನುತುಪ್ಪದ ಫೇಸ್ ಪ್ಯಾಕ್
 
- 1 ಚಮಚ ಜೇನುತುಪ್ಪ ಮತ್ತು ಮೊಸರನ್ನು ಬೆರೆಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 
 
ಬಾಳೆ ಹಣ್ಣು ಮೊಸರಿನ ಫೇಸ್ ಪ್ಯಾಕ್
 
- 1/2 ಚೆನ್ನಾಗಿ ಹಣ್ಣಾದ ಬಾಳೆ ಹಣ್ಣನ್ನು ಹಿಸುಕಿ, 1/2 ಚಮಚ ಜೇನುತುಪ್ಪ , 1 ಚಮಚ ಮೊಸರು ಸೇರಿಸಿ ಮುಖಕ್ಕೆ ಲೇಪಿಸಿ, 15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.
 
ಲಿಂಬೆ ಮತ್ತು ಮೊಸರಿನ ಪ್ಯಾಕ್
 
- 2 ಚಮಚ ಮೊಸರಿಗೆ 1 ಚಮಚ ಲಿಂಬೆ ರಸವನ್ನು ಸೇರಿಸಿ ಮುಖಕ್ಕೆ ಲೇಪಿಸಿ, 15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.
 
ಮೊಸರು ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ 
 
2 ಚಮಚ ಮುಲ್ತಾನಿ ಮಿಟ್ಟಿಗೆ 2 ಚಮಚ ಮೊಸರನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ನಂತರ 20 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ.ಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ಸುಂದರ ತ್ವಚೆಗಾಗಿ ಮನೆಯಲ್ಲಿಯೇ ತಯಾರಿಸಿ ರೋಸ್ ವಾಟರ್..!!

ಸೌಂದರ್ಯವರ್ಧಕಗಳನ್ನು ಬಳಸುವ ಮೂಲಕ ಸೌಂದರ್ಯವನ್ನು ಹೆಚ್ಚಿಸಕೊಳ್ಳಬಹುದು, ಅದರೆ ಈ ಸೌಂದರ್ಯವರ್ಧಕಗಳಲ್ಲಿ ...

news

ಸುಂದರ ಮುಖಕ್ಕಾಗಿ ಮನೆಯಲ್ಲಿಯೇ ತಯಾರಿಸಿ ರೋಸ್ ಆಲೋವೆರಾ ಜೆಲ್!!

ಆಲೋವೆರಾವನ್ನು ಅದ್ಭುತ ಸಸ್ಯವೆಂದು ಕರೆಯಲಾಗುತ್ತದೆ ಮತ್ತು ಇದನ್ನು ಅನೇಕ ಆರೋಗ್ಯ ಮತ್ತು ಔಷಧೀಯ ...

news

ಮದುವೆ ದಿನ ವಧುವಿನ ಬಳಿ ಹೇಳಲೇಬಾರದ ಆ ಮೂರು ವಿಚಾರಗಳು!

ಬೆಂಗಳೂರು: ಮದುವೆ ದಿನ ಎನ್ನುವುದು ಯಾವುದೇ ಗಂಡು-ಹೆಣ್ಣಿನ ಬಾಳಲ್ಲಿ ಮಹತ್ವದ ದಿನ. ಆ ದಿನದ ಸಂತೋಷವನ್ನು ...

news

ತಲೆಗೂದಲ ಉದುರುವಿಕೆಯನ್ನು ತಡೆಯಲು ಕೆಲವು ನೈಸರ್ಗಿಕ ಔಷಧಗಳು..

ಕೂದಲ ಸೀಳು, ವಿಪರೀತ ಕೂದಲು ಉದುರುವಿಕೆಯು ವಿಶೇಷವಾಗಿ ಮಹಿಳೆಯರಲ್ಲಿ ಹೆಚ್ಚು ಆತಂಕವನ್ನು ಉಂಟುಮಾಡುತ್ತದೆ. ...

Widgets Magazine