ಕಾಲಿನ ಅಂದವನ್ನು ಹೆಚ್ಚಿಸಲು ಹೀಗೆ ಮಾಡಿ

ಬೆಂಗಳೂರು, ಗುರುವಾರ, 12 ಜುಲೈ 2018 (14:51 IST)

ಸೌಂದರ್ಯದ ಬಗ್ಗೆ ಕಾಳಜಿ ವಹಿಸುವ ಅನೇಕ ಮಹಿಳೆಯರು ತಮ್ಮ ಕೂದಲು, ಮುಖ, ಕೈಗಳ ಸೌಂದರ್ಯಕ್ಕಷ್ಟೇ ಹೆಚ್ಚು ನಿಗಾವಹಿಸುತ್ತಾರೆ, ಪಾದಗಳ ಸೌಂದರ್ಯದತ್ತ ಗಮನಹರಿಸುವುದು ಕಡಿಮೆ. ಪಾದದ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಒಂದಷ್ಟು ಹೊತ್ತು ವ್ಯಯ ಮಾಡಲೇಬೇಕು.
- ಕಿತ್ತಳೆ ಸಿಪ್ಪೆಯ ಪೌಡರ್ ಗೆ ಒಂದು ಟೇಬಲ್ ಸ್ಪೂನ್ ನಷ್ಟು ಜೇನುತುಪ್ಪ ಸೇರಿಸಿ ಮತ್ತು ಸಕ್ಕರೆ ಸೇರಿಸಿ ದಪ್ಪ ಹಿಟ್ಟಿನಂತೆ ಮಾಡಿಕೊಂಡು ಹಚ್ಚಿ 20 ನಿಮಿಷದ ನಂತರ ತೊಳೆಯಿರಿ.
 
- ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪೌಡರ್ ಮಾಡಿ, ಸ್ವಲ್ಪ ಮೊಸರು ಸೇರಿಸಿ ಕೈ ಮತ್ತು ಕಾಲುಗಳಿಗೆ ಹಚ್ಚಿ 20 ನಿಮಿಷಗಳ ನಂತರ ತೊಳೆಯಿರಿ.
 
- ಕಾಲಿನ ಹಿಮ್ಮಡಿ ಒಡೆದು ಧೂಳು ಸೇರಿದಂತೆ ಮಣ್ಣು ಸೇರಿಕೊಂಡು ಕಪ್ಪಗಾಗಿ ಅಸಹ್ಯ ಎನಿಸಿದರೆ ಅಡುಗೆ ಸೋಡಾದಿಂದ ತೊಳೆಯಿರಿ.
 
- ಸ್ವಲ್ಪ ಹಾಲನ್ನು ಬಳಸಿ ಪಾದವನ್ನು ಮಸಾಜ್ ಮಾಡಿ, ನಂತರ ಹಾಲು ಹಾಗೂ ಬೇಕಿಂಗ್ ಪೌಡರ್ ಸೇರಿಸಿ ನಿಮ್ಮ ಪಾದಕ್ಕೆ ಹಚ್ಚಿ 10 ನಿಮಿಷಗಳ ಬಳಿಕ ಕಾಲಿನ ಡೆಡ್ ಸ್ಕಿನ್‌ಗಳನ್ನು ತೆಗೆಯಿರಿ. ಹೀಗೆ ಮಾಡುವುದರಿಂದ ಒಡೆದ ಪಾದಗಳಿಂದ ಮುಕ್ತಿಪಡೆಯಬಹುದು. 
 
- ವಾರಕ್ಕೊಮ್ಮೆ ಬಿಸಿನೀರಿಗೆ ಕೊಂಚ ಉಪ್ಪು ಸೇರಿಸಿ ಅದರಲ್ಲಿ ಪಾದಗಳನ್ನು ಮುಳುಗಿಸಿಡುವುದರಿಂದ ರಿಲ್ಯಾಕ್ಸ್ ಆಗುತ್ತದೆ.
 
- ಗ್ಲಿಸರಿನ್ ಮತ್ತು ಜೇನನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ಮಾಡಿ ರಾತ್ರಿ ಅದನ್ನು ಕಾಲಿನ ಒಡೆದ ಹಿಮ್ಮಡಿಗೆ ಹಚ್ಚಿ ಬೆಳಗ್ಗೆ ತೊಳೆದರೆ, ಹಿಮ್ಮಡಿ ನುಣುಪಾಗುತ್ತದೆ.
 
- ನಿಂಬೆಹಣ್ಣಿ ಹೋಳನ್ನು ಆನಿಯಿದ್ದ ಸ್ಥಕ್ಕೆ ಕಟ್ಟಿ ಇಡೀ ರಾತ್ರಿ ಇರಲು ಬಿಡಿ. ಇದು ಆನಿ ಒಣಗುವಂತೆ ಮಾಡುತ್ತದೆ.
 
- ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ಬಿರುಕು ಬಿಟ್ಟಿರುವ ಅಂಗಾಲಿಗೆ ಲೇಪಿಸಿದರೆ ಬಿರುಕು ಬಿಡುವುದು ನಿವಾರಣೆಯಾತ್ತದೆ.
 
- ಮಲಗುವ ಮೊದಲು ಈರುಳ್ಳಿಯ ಬಿಲ್ಲೆಗಳನ್ನು ಬಿರುಕು ಬಿಟ್ಟಿರುವ ಹಿಮ್ಮಡಿಯಲ್ಲಿ ಇಟ್ಟು, ಸಾಕ್ಸ್ ಹಾಕಿ ಮಲಗಿ, ಬೆಳಿಗ್ಗೆ ತೊಳೆದರೆ, ಹಿಮ್ಮಡಿ ನುಣುಪಾಗುತ್ತದೆ ಮತ್ತು ಬಿರುಕು ಕಡಿಮೆಯಾಗುತ್ತದೆ. 
 
- ಕಾಲಿನ ಕೂದಲು ತೆಗೆದ ಕೂಡಲೇ ರೋಸ್ ವಾಟರ್ ಬಳಸಿದರೆ ಕಾಲಿನ ಚರ್ಮದಲ್ಲಿ ದಿನವಿಡೀ ತೇವಾಂಶವನ್ನು ಕಾಪಾಡಿಕೊಳ್ಳುವುದು.



ಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ನೀವು ಉಗುರುಗಳಿಗೆ ಹಚ್ಚಿದ ಬಣ್ಣಗಳು ತುಂಬಾದಿನ ಚೆನ್ನಾಗಿರಲು ಹೀಗೆ ಮಾಡಿ..

ಈ ದಿನಗಳಲ್ಲಿ ಎಲ್ಲ ಮಹಿಳೆಯರೂ ಅಂದವಾಗಿ ಕಾಣಲು ಉಗುರುಗಳಿಗೆ ಬಣ್ಣವನ್ನು ಹಚ್ಚಿಕೊಳ್ಳುತ್ತಾರೆ. ಆದರೆ ...

news

ಗ್ಲೋಯಿಂಗ್ ಸ್ಕಿನ್ ನಿಮ್ಮದಾಗಿಸಿಕೊಳ್ಳಲು ಹೀಗೆ ಮಾಡಿ

ಬೆಳ್ಳಗಿನ ಹೊಳೆಯುವ ತ್ವಚೆ ಯಾರಿಗೆ ತಾನೇ ಬೇಡ? ಆರೋಗ್ಯವಂತ ತ್ವಚೆಗಾಗಿ ಉತ್ತಮವಾದ ಆಹಾರ ಪದಾರ್ಥಗಳ ಸೇವನೆ ...

news

ಗ್ಲಿಸರಿನ್ ನಲ್ಲಿ ಅಡಗಿದೆ ಮುಖದ ಹಲವು ಸಮಸ್ಯೆಗಳಿಗೆ ಪರಿಹಾರ

ಬೆಂಗಳೂರು : ಗ್ಲಿಸರಿನ್ ಹಲವಾರು ಆರೋಗ್ಯದ ಪ್ರಯೋಜನಗಳನ್ನು ಹೊಂದಿದೆ. ಇದು ಮಲಬದ್ಧತೆಯಿಂದ ನಿಮ್ಮನ್ನು ...

news

ನಾವು ಸೇವಿಸುವ ಆಹಾರ ಪದಾರ್ಥದಲ್ಲಿ ಈ ಅಂಶ ಹೆಚ್ಚಾದರೆ ಸಾವು ಖಚಿತ

ಬೆಂಗಳೂರು : ಜಾರ್ಜ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ಹಾಗೂ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ...

Widgets Magazine
Widgets Magazine