ಆಹಾರವೂ ಚರ್ಮವನ್ನು ಕಾಪಾಡುತ್ತದೆ...

ಸೋಮವಾರ, 21 ಏಪ್ರಿಲ್ 2014 (12:16 IST)

ಹೊಳೆಯುವ ಇಂದಿನ ಯುವತಿಯರ ಕನಸಾಗಿದೆ. ಬಿಸಿಲು , ಏರ್ ಕಂಡೀಷನ್ , 
 
ಕಾಸ್ಮೆಟಿಕ್ಸ್ , ವಾತಾವರಣ ಮತ್ತು ಒತ್ತಡ ತ್ವಚೆಯ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮವನ್ನು 
 
ಉಂಟು ಮಾಡುತ್ತದೆ.ಕೆಳಗೆ ನೀಡಿರುವ ಅಂಶಗಳನ್ನು ಬದುಕಿನಲ್ಲಿ ಅಳವಡಿಸಿ ಕೊಂಡರೆ ಚರ್ಮದ 
 
ಸಮಸ್ಯೆಯನ್ನು ದೂರ ಮಾಡಿಕೊಳ್ಳ ಬಹುದಾಗಿದೆ. 
 
ನೀವು ಯಾವುದನ್ನು ಸೇವಿಸುತ್ತೀರಿ ಎನ್ನುವ ಅಂಶಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವುದು ತುಂಬಾ 
 
ಮುಖ್ಯ.ಸುಂದರ ತ್ವಚೆಯ ಹೊಂದುವುದು ಕಲ್ಪನೆ ಎನ್ನುವ ಅಭಿಪ್ರಾಯ ನಿಮ್ಮಲ್ಲಿದ್ದರೆ ಅದು ತಪ್ಪು 
 
ಗ್ರಹಿಕೆ. ಹೊಟ್ಟೆಯು ಸರಿಯಾಗಿದ್ದರೆ ಆಗ ಆಹಾರವು ಸುಗಮವಾಗಿ ಜೀರ್ಣವಾಗುತ್ತದೆ, ಇದರಿಂದ ನಾವು 
 
ಸೇವಿಸುವ ಆಹಾರದಲ್ಲಿರುವ ಜೀವ ಸತ್ವಗಳು ದೇಹದಲ್ಲಿ ಸೇರ್ಪಡೆಯಾಗುತ್ತದೆ.ಅಷ್ಟೇ ಅಲ್ಲದೇ ದೇಹದ 
 
ಆರೋಗ್ಯವನ್ನು ದೂರ ಮಾಡುವಂತಹ ಬ್ಯಾಕ್ಟೀರಿಯಾಗಳು ಬೆಳವಣಿಗೆ ಕುಂಠಿತವಾಗುತ್ತದೆ. 
 
ಮೊಸರಿನಿಂದ ನಮ್ಮ ದೇಹಕ್ಕೆ ಒಳ್ಳೆಯ ಬ್ಯಾಕ್ಟೀರಿಯಾಗಳು ಸಿಗುತ್ತದೆ.ಅದೇ ರೀತಿ ಮುಸುಕು 
 
ಹೊಂದಿರುವ ಕಾಳುಗಳು, ಬಾಳೆ ಹಣ್ಣು, ಬೆಳ್ಳುಳ್ಳಿ, ಈರುಳ್ಳಿ, ಇವೆಲ್ಲವೂ ಆರೋಗ್ಯ ಹೆಚ್ಚಿಸುವಂತಹದ್ದು 
 
,ಇದು ದೇಹದಲ್ಲಿ ರಕ್ತಹೀನತೆಯನ್ನು ದೂರ ಮಾಡುತ್ತದೆ. 
 
ನೀರನ್ನು ಹೇರಳವಾಗಿ ಸೇವಿಸಿದರೆ ಇದು ಚರ್ಮದ ರಕ್ಷಣೆಯನ್ನು ಮಾಡುವುದಲ್ಲದೇ ಅದರ ಹೊಳಪನ್ನು 
 
ಹೆಚ್ಚಿಸುತ್ತದೆ.
 
ಬಣ್ಣವು ಚರ್ಮದ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಉಂಟು ಮಾಡುತ್ತದೆ. ನಿಮ್ಮ ತ್ವಚೆಯನ್ನು 
 
ಕಾಂತಿಯುಕ್ತಗೊಳಿಸುತ್ತದೆ, ಇದು ವಾರ್ಧಕ್ಯದ ಸಮಸ್ಯೆಯನ್ನು ದೂರ ಮಾಡುತ್ತದೆ . ಬ್ಲಾಕ್ ಬೆರ್ರಿ, ಬ್ಲೂ 
 
ಬೆರ್ರಿ, ಹುಳಿಯಿಲ್ಲದ ದಾಕ್ಷಿ ಹಣ್ಣುಗಳು, ಸ್ಟ್ರಾ ಬೆರ್ರಿ, 
 
ಟೊಮೇಟೊ ದಲ್ಲಿರುವ ಲೈಕೊಪಿನ್, ದಾಳಿಂಬೆಯಲ್ಲಿರುವ ಪಾಲಿಫೆನಾಲ್ಸ್ ಇವೆಲ್ಲವೂ ಚರ್ಮದ 
 
ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕಾರಿ.ಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ವ್ಯಕ್ತಿಯ ಚಂದ ಹೆಚ್ಚಿಸುವ ಕಣ್ಣುಗಳು

ಕಣ್ಣುಗಳು ಕಾಂತಿಯುಕ್ತವಾಗಿ ಆರೋಗ್ಯಪೂರ್ಣವಾಗಿದ್ದರೆ ವ್ಯಕ್ತಿಯ ಸೌಂದರ್ಯ ಇಮ್ಮಡಿಸುತ್ತದೆ. ಕಣ್ಣು ...

ಬೊಕ್ಕ ತಲೆಯಿಂದ ಪಾರಾಗಲು ಕೂದಲು ಕಸಿ

ಬೆಂಗಳೂರು: ಪ್ರಸಕ್ತ ದಿನಗಳಲ್ಲಿ ಕೂದಲು ಉದುರುವಿಕೆ ಸಾಮಾನ್ಯ. ಹಿಂದೊಂದು ಕಾಲದಲ್ಲಿ ವೃದ್ಧಾಪ್ಯ ಬಂದರೆ ...

ವ್ಯಕ್ತಿಯ ಚಂದ ಹೆಚ್ಚಿಸುವ ಕಣ್ಣುಗಳು

ಕಣ್ಣುಗಳು ಕಾಂತಿಯುಕ್ತವಾಗಿ ಆರೋಗ್ಯಪೂರ್ಣವಾಗಿದ್ದರೆ ವ್ಯಕ್ತಿಯ ಸೌಂದರ್ಯ ಇಮ್ಮಡಿಸುತ್ತದೆ. ಕಣ್ಣು ಹಾಗೂ ...

ಆಹಾರವೂ ಚರ್ಮವನ್ನು ಕಾಪಾಡುತ್ತದೆ...

ಕಲೆಯಿಲ್ಲದ ಹೊಳೆಯುವ ಚರ್ಮ ಇಂದಿನ ಯುವತಿಯರ ಕನಸಾಗಿದೆ. ಬಿಸಿಲು , ಏರ್ ಕಂಡೀಷನ್ , ಕಾಸ್ಮೆಟಿಕ್ಸ್ , ...

Widgets Magazine