ಹೆಂಗಳೆಯರೇ ಗುಲಾಬಿ ರಂಗಿನ ತುಟಿ ನಿಮ್ಮದಾಗಬೇಕೆ ಇಲ್ಲಿದೆ ನೋಡಿ ಸುಲಭ ಟಿಪ್ಸ್!

ಬೆಂಗಳೂರು, ಬುಧವಾರ, 7 ಮಾರ್ಚ್ 2018 (07:10 IST)

Widgets Magazine

ಬೆಂಗಳೂರು: ಹೆಣ್ಣುಮಕ್ಕಳಿಗೆ ತಮ್ಮ ತುಟಿಗೆ ಎಷ್ಟೇ ಆರೈಕೆ ಮಾಡಿದರೂ ಕಡಿಮೆ ಅನಿಸುತ್ತೆ. ಗುಲಾಬಿ ರಂಗಿನ ತುಟಿ ಎಂದರೆ ಎಲ್ಲರಿಗೂ ಇಷ್ಟ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಹಾಗೂ ರಾಸಾಯನಿಕ ವಸ್ತುಗಳಿಂದ ಕೃತಕ ರಂಗು ಪಡೆಯುವುದಕ್ಕಿಂತ ನೈಸರ್ಗಿಕವಾಗಿ ತುಟಿಯ ರಂಗು ಹೇಗೆ ಹೆಚ್ಚಿಸಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಟಿಪ್ಸ್


ತುಟಿಗಳಲ್ಲಿ ತಮ್ಮ ರಂಗು ಕಳೆದುಕೊಂಡು ಕಪ್ಪಾಗಿದ್ದರೆ, ಇದನ್ನು ನಿವಾರಿಸಲು ತುಟಿಗಳಿಗೆ ಸದಾ ಮಾಯಿಶ್ಚರೈಸರ್, ಜೆಲ್ಲಿ ಲಿಪ್ ಬಾಮ್ ಮುಂತಾದುವುಗಳನ್ನು ಬಳಸಿಕೊಂಡು, ತುಟಿಗಳಲ್ಲಿ ತೇವವಿರುವಂತೆ ಎಚ್ಚರಿಕೆ ವಹಿಸಿ. ಹೀಗೆ ಮಾಡುವುದರಿಂದ ತುಟಿಯಲ್ಲಿ ಬಿರುಕು ಮೂಡುವುದಿಲ್ಲ, ಬಣ್ಣವೂ ಬರುತ್ತದೆ.


ದಾಳಿಂಬೆಯ ಬೀಜಗಳನ್ನು ಚೆನ್ನಾಗಿ ಪೇಸ್ಟ್‌ನಂತೆ ಮಾಡಿಕೊಳ್ಳಿ. ನಂತರ, ಇದನ್ನು ತುಟಿಗಳಿಗೆ ಹಚ್ಚಿ. ಹತ್ತರಿಂದ ಹದಿನೈದು ನಿಮಿಷ ಹಾಗೆಯೇ ಬಿಡಿ. ಹೀಗೆ ಮಾಡುವುದರಿಂದ ತುಟಿಗಳ ಸೌಂದರ್ಯ ಹೆಚ್ಚುವುದಲ್ಲದೇ, ತುಟಿಯಲ್ಲಿ ಬಿರುಕು ಮೂಡುವುದಿಲ್ಲ.


ಗುಲಾಬಿ ದಳಗಳನ್ನು ಸ್ವಲ್ಪ ಸಮಯ ಹಾಲಿನಲ್ಲಿ ಮುಳುಗಿಸಿಡಿ. ನಂತರ, ಅದೇ ಹಾಲನ್ನು ಬಳಸಿಕೊಂಡು, ದಳಗಳನ್ನು ಮಿಶ್ರ ಮಾಡಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಒಂದೆರೆಡು ಹನಿ ಗ್ಲಿಸರಿನ್ ಮತ್ತು ಜೇನುತುಪ್ಪವನ್ನು ಬೆರೆಸಿ, ತುಟಿಗಳಿಗೆ ಹಚ್ಚಿ, ಹದಿನೈದು ನಿಮಿಷಗಳ ನಂತರ ಒಣಬಟ್ಟೆಯಿಂದ ಒರೆಸಿ ತೆಗೆಯಿರಿ. ಇದು ತುಟಿಗಳ ಆರೈಕೆಯಲ್ಲಿ ಹೆಚ್ಚು ಉತ್ತಮವಾಗಿರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಮಾದಕ ಸೌಂದರ್ಯ ಟಿಪ್ಸ್‌

news

ತುಟಿ ಒಡೆಯುವುದಕ್ಕೆ ಲಿಪ್ ಬಾಮ್ ಹಚ್ಚಿ ನಿರಾಸೆಯಾಗೊಂಡಿದ್ದೀರಾ? ಹಾಗಿದ್ದರೆ ಈ ಟ್ರಿಕ್ ಮಾಡಿ ನೋಡಿ

ಬೆಂಗಳೂರು: ತುಟಿ ಒಡೆಯುವುದಕ್ಕೆ ಹೆಚ್ಚಾಗಿ ನಾವು ಮಾಡುವ ಮನೆ ಮದ್ದು ಎಂದರೆ ಲಿಪ್ ಬಾಮ್, ಲಿಪ್ ಕೇರ್ ನಂತಹ ...

news

ಮುಖದ ಅಂದಕ್ಕಿರಲಿ ಪಪ್ಪಾಯ ಹಣ್ಣಿನ ಸಾಥ್

ಬೆಂಗಳೂರು: ಪಪ್ಪಾಯ ಹಣ್ಣು ದೇಹಕ್ಕೂ ಹಿತಕರ. ಹಾಗೇ ಮುಖದ ಸೌಂದರ್ಯಕ್ಕೂ ಮದ್ದು. ಬ್ಯೂಟಿಪಾರ್ಲರ್ ಗೆ ಹೋಗಿ ...

news

ದಪ್ಪ ಸೊಂಟವಿದ್ದರೆ ಎಂತಹಾ ಡ್ರೆಸ್ ಹಾಕಬೇಕು?

ಬೆಂಗಳೂರು: ಸೌಂದರ್ಯವಿರುವುದೇ ಸವಿಯಲು. ಇತ್ತೀಚೆಗಿನ ದಿನಗಳಲ್ಲಂತೂ ಮಹಿಳೆಯರು ತಮ್ಮ ಅಂದದ ಬಳುಕುವ ನಡು ...

news

ಒದ್ದೆ ಕೂದಲಿನಲ್ಲೇ ಹೊರಗಡೆ ಹೋದರೆ ಆಗುವ ಸಮಸ್ಯೆಗಳೇನು ಗೊತ್ತಾ?

ಬೆಂಗಳೂರು: ಕೆಲವೊಮ್ಮೆ ಕೆಲಸದ ಗಡಿಬಿಡಿಯಲ್ಲಿ ಹೊರಗಡೆ ಹೋಗುವಾಗ ಕೂದಲು ಒಣಗಿಸಿಕೊಳ್ಳಲೂ ಸಮಯವಿರುವುದಿಲ್ಲ. ...

Widgets Magazine