ಬೆವರಿನ ಕಿರಿ ಕಿರಿಗೆ ಮುಕ್ತಿ ಕೊಡಬೇಕಾದರೆ ಹೀಗೆ ಮಾಡಿ!

ಬೆಂಗಳೂರು, ಗುರುವಾರ, 22 ಫೆಬ್ರವರಿ 2018 (09:52 IST)

ಬೆಂಗಳೂರು: ಇನ್ನೇನು ಚಳಿಗಾಲ ಮುಗಿದು ಬೇಸಿಗೆ ಬರುತ್ತಿದೆ. ಬೇಸಿಗೆ ಬಂದೊಡನೆ ಬೆವರಿನದ್ದೇ ಕಿರಿ ಕಿರಿ. ಈ ರೀತಿ ಅತಿಯಾಗಿ ಬೆವರು ಸುರಿದು ಅಸಹ್ಯವಾಗುತ್ತಿದ್ದರೆ ಕೆಲವು ಮನೆ ಮದ್ದು ಮಾಡಿ ನೋಡಬಹುದು.
 

ಬೇಕಿಂಗ್ ಸೋಡಾ
ಬೇಕಿಂಗ್ ಸೋಡಾವನ್ನು ಕಂಕುಳ ಕೆಳಗೆ ಹಾಗೂ ಅತೀ ಹೆಚ್ಚು ಬೆವರು ಸುರಿಯುವ ದೇಹದ ಭಾಗಗಳಿಗೆ ರಾತ್ರಿ ಮಲಗುವ ಮುನ್ನ ಹಚ್ಚಿಕೊಳ್ಳಿ. ಬೆಳಿಗ್ಗೆ ಯಥಾವತ್ತು ಸ್ನಾನ ಮಾಡಿಕೊಳ್ಳಿ. ಇದರಿಂದ ಆ ಭಾಗದಲ್ಲಿ ಬೆವರು ಹರಿದು ಕೆಟ್ಟ ವಾಸನೆ ಬರುವುದು ತಪ್ಪುತ್ತದೆ.
 
ಕೊಬ್ಬರಿ ಎಣ್ಣೆ
ಇದು ಸುಲಭವಾಗಿ ಕೈಗೆಟುಕುವ ಸಾಧನ. ಕೊಬ್ಬರಿ ಎಣ್ಣೆಯಲ್ಲಿರುವ ಲಾರಿಕ್ ಏಸಿಡ್ ದೇಹದಲ್ಲಿ ಬೆವರಿನಿಂದ ಉಂಟಾಗುವ ಕೆಟ್ಟ ವಾಸನೆ ಹೋಗಲಾಡಿಸುತ್ತದೆ.
 
ಬ್ಲ್ಯಾಕ್ ಟೀ
ಹೆಚ್ಚು ಬೆವರುವ ದೇಹದ ಭಾಗಕ್ಕೆ ಬ್ಲ್ಯಾಕ್ ಟೀಯನ್ನು ಹತ್ತಿಯಲ್ಲಿ ಅದ್ದಿಕೊಂಡು ಹಚ್ಚಿಕೊಳ್ಳಿ.
 
ಅಲ್ಯುವಿರಾ
ಅಲ್ಯುವೀರಾ ದೇಹಕ್ಕೆ ತಂಪು. ಬೆವರುವ ಭಾಗಕ್ಕೆ ಅಲ್ಯುವೀರಾ ಜೆಲ್ ಹಚ್ಚಿಕೊಂಡರೆ ಬೆವರು ಕಡಿಮೆಯಾಗುವುದಲ್ಲದೆ, ದೇಹವನ್ನೂ ಕೂಲ್ ಆಗಿರಿಸುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ತ್ವಚೆ ಕಾಪಾಡಿಕೊಳ್ಳಲು ಪುರುಷರು ಹೀಗೆ ಮಾಡಲೇಬೇಕು!

ಬೆಂಗಳೂರು: ಇತ್ತೀಚೆಗೆ ಪುರುಷರಲ್ಲೂ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳುವ ಕಾಳಜಿ ಹೆಚ್ಚುತ್ತಿದೆ. ...

news

ಉಪ್ಪು ಬಳಸಿಯೂ ತಲೆಹೊಟ್ಟು ನಿವಾರಿಸಬಹುದು!

ಬೆಂಗಳೂರು: ತಲೆ ಹೊಟ್ಟಿನ ಸಮಸ್ಯೆಗೆ ಯಾವುದೋ ಮನೆ ಮದ್ದು ಮಾಡಿ ಪ್ರಯೋಜನ ಕಂಡಿಲ್ಲವೇ? ಹಾಗಿದ್ದರೆ ಈ ಮನೆ ...

news

ಸ್ಟ್ರಾಬೆರಿ ಫೇಸ್ ಪ್ಯಾಕ್ ಮಾಡೋದು ಹೇಗೆ?

ಬೆಂಗಳೂರು: ಸ್ಟ್ರಾಬೆರಿ ಎಂದರೆ ಸೌಂದರ್ಯ, ಬ್ಯೂಟಿ ಎಂದೇ ಜ್ಞಾಪಕಕ್ಕೆ ಬರುತ್ತದೆ. ಮಕ್ಕಳೂ ಇಷ್ಟಪಡುವ ಈ ...

news

ಮೊಡವೆ ಸಮಸ್ಯೆಗೆ ಬೇಕಿಂಗ್ ಸೋಡಾ ಬಳಸಿ ಈ ಮನೆ ಮದ್ದು ಮಾಡಿ

ಬೆಂಗಳೂರು: ಮೊಡವೆ ಸಮಸ್ಯೆ ಎಲ್ಲಾ ಹದಿಹರೆಯದವರಿಗೂ ಕಾಡುವ ಸಮಸ್ಯೆಯೇ. ಇದರ ಪರಿಹಾರಕ್ಕೆ ಬೇಕಿಂಗ್ ಸೋಡಾ ...

Widgets Magazine
Widgets Magazine