ಕೇವಲ 2 ಪದಾರ್ಥಗಳನ್ನು ಬಳಸಿ ಹೊಳೆಯುವ ಚರ್ಮವನ್ನು ಪಡೆಯುವುದು ಹೇಗೆ!?

ಬೆಂಗಳೂರು, ಶುಕ್ರವಾರ, 8 ಜೂನ್ 2018 (16:28 IST)

ಹಲವರ ಸಮಸ್ಯೆ ಆರಂಭವಾಗುವುದೇ ಚರ್ಮದ ಬಣ್ಣ ಕಪ್ಪಾಗಿರುವುದರಿಂದ. ನಿಮ್ಮ ಚರ್ಮದ ಬಣ್ಣ ಕುಂಠಿತವಾಗಲು ಹಲವು ಕಾರಣಗಳಿವೆ. ನಿಮ್ಮ ಚರ್ಮವನ್ನು ಉತ್ತಮವಾಗಿ ಆರೈಕೆ ಮಾಡದಿದ್ದರೆ ಚರ್ಮದ ನೈಸರ್ಗಿಕವಾದ ಹೊಳಪು ಮತ್ತು ಮೃದುತ್ವ ಕಡಿಮೆಯಾಗುತ್ತದೆ.

ಸೂರ್ಯನ ಕಿರಣಗಳಿಗೆ ಅತಿಯಾಗಿ ತೆರೆದುಕೊಂಡರೆ ನಿಮ್ಮ ಚರ್ಮದ ಬಣ್ಣ ಕಪ್ಪಾಗುತ್ತದೆ ಮತ್ತು ಚರ್ಮವನ್ನು ಒಣಗಿಸುತ್ತದೆ. ಅದಲ್ಲದೆ, ಚರ್ಮದ ಹೊಳಪಿಗಾಗಿ ನೀವು ಬಳಸುವ ಔಷಧಗಳಲ್ಲಿನ ರಾಸಾಯನಿಕ ಪದಾರ್ಥಗಳೂ ಸಹ ನಿಮ್ಮ ಚರ್ಮದ ಆರೋಗ್ಯಕ್ಕೆ ಹಾನಿಯನ್ನುಂಟುಮಾಡಬಹುದು. ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದೆ ಯೋಚಿಸಬೇಕಾದ ಅಗತ್ಯವಿಲ್ಲ. ಕೇವಲ ಎರಡೇ ಪದಾರ್ಥಗಳನ್ನು ಬಳಸಿ ಹೊಳೆಯುವ ಸುಂದರವಾದ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.
 
ನಿಮ್ಮ ಚರ್ಮದ ಸೌಂದರ್ಯವನ್ನು ಕಾಪಾಡಲು ನಿಮಗೆ ಬೇಕಾಗುವ ಸಾಮಗ್ರಿಗಳು,
* ಕಲ್ಲುಪ್ಪು
* ಹಸಿ ಹಾಲು
ಹೌದು, ಕೇವಲ ಈ ಎರಡು ವಸ್ತುಗಳಿಂದ ನೀವು ಹೊಳೆಯುವ ಸುಂದರ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.
 
ಮೊದಲು ನಿಮ್ಮ ಮುಖವನ್ನು ಹಸಿ ಹಾಲನ್ನು ಬಳಸಿ ಚೆನ್ನಾಗಿ ಮಸಾಜ್ ಮಾಡಿ. ನಂತರ ಸ್ವಲ್ಪ ಕಲ್ಲುಪ್ಪನ್ನು ತೆಗೆದುಕೊಂಡು ಮೇಲ್ಮುಖವಾಗಿ 1 ನಿಮಿಷ ಮಸಾಜ್ ಮಾಡಿ. ಅದನ್ನು 5 ರಿಂದ 10 ನಿಮಿಷ ಹಾಗೆಯೇ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದರೆ ನಿಮ್ಮದಾಗುತ್ತದೆ. ನೀವು ಈ ವಿಧಾನವನ್ನು ಕಾಲು ಮತ್ತು ಕೈಗಳಿಗೂ ಸಹ ಬಳಸಬಹುದಾಗಿದೆ.
 
ಈ ವಿಧಾನದಿಂದ ನೀವು ಕೇವಲ 10 ನಿಮಿಷಗಳಲ್ಲಿ ಪರಿಣಾಮವನ್ನು ಕಾಣಬಹುದಾಗಿದ್ದು ತುಂಬಾ ಕಡಿಮೆ ವೆಚ್ಚವೂ ಆಗಿದೆ. ಆದ್ದರಿಂದ ನಿಮ್ಮ ಚರ್ಮದ ಬಣ್ಣ ಕಪ್ಪಾಗಿದ್ದರೆ ಈ ವಿಧಾನವನ್ನು ಅನುಸರಿಸಿ ತಕ್ಷಣವೇ ಪರಿಣಾಮವನ್ನು ಕಂಡುಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ಬ್ಲ್ಯಾಕ್ ಹೆಡ್ಸ್ ನಿವಾರಣೆಗೆ ಸರಳ ಉಪಾಯಗಳು

ಮುಖವನ್ನು ಸ್ಕ್ರಬ್‌ ಮಾಡುವುದು ಮಹಿಳೆಯರಿಗೆ ಎಷ್ಟು ಅಗತ್ಯವೋ ಅಷ್ಟೇ ಅಗತ್ಯ ಪುರುಷರಿಗೂ ಇದೆ. ಸತ್ತ ಚರ್ಮ ...

news

ಬಿಳುಪಾದ ಹಲ್ಲು ನಿಮ್ಮದಾಗಬೇಕೆ…?

ಬೆಂಗಳೂರು: ಬಿಳುಪಾದ ಹಲ್ಲು ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಹಲ್ಲು ಹಳದಿಯಾಗಿದ್ದರೆ ನಗುವುದಕ್ಕೂ ...

news

ನಿಮ್ಮ ಮುಖವು ಹೊಳೆಯುವಂತೆ ಮಾಡಲು ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು: ಇಂದಿನ ಜೀವನಶೈಲಿ, ನಾವು ಸೇವಿಸುವ ಆಹಾರ ಇವುಗಳೆಲ್ಲವೂ ನಮ್ಮ ಆರೋಗ್ಯದ ಮೇಲೆ ಪರಿಣಾಮ ...

news

ಬೇಸಿಗೆಯಲ್ಲಿ ಮುಖ ನಳನಳಿಸಬೇಕೆ….? ಹೀಗೆ ಮಾಡಿ!

ಬೆಂಗಳೂರು: ಬೇಸಿಗೆಯಲ್ಲಿ ಮಹಿಳೆಯರನ್ನು ಕಾಡುವ ಅತ್ಯಂತ ದೊಡ್ಡ ಸಮಸ್ಯೆಯೆಂದರೆ ಸ್ಕಿನ್ ಟ್ಯಾನ್‌. ಎಷ್ಟೇ ...

Widgets Magazine
Widgets Magazine