ಈಗಿನ ವಿದ್ಯಮಾನದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು, ಸೌಂದರ್ಯವನನ್ನು ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲೇ ಸರಿ. ಇದಕ್ಕಾಗಿ ನಮ್ಮ ಯುವಜನತೆಯಷ್ಟೇ ಅಲ್ಲದೇ 40 ದಾಟಿದವರೂ ಸಹ ಯೌವ್ವನವನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಅದರಲ್ಲಿಯೂ ಚಳಿಗಾಲದಲ್ಲಿ ಮತ್ತು ಬೇಸಿಗೆಕಾಲದಲ್ಲಿ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕಷ್ಟಕರ. ಆದರೆ ಕಿತ್ತಳೆ ಹಣ್ಣು ಸಹ ಚಳಿಗಾಲದ ಸೀಸನ್ ಫುಡ್ ಆಗಿದೆ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಾಡದೇ ಅದರಿಂದ ಫೇಸ್ ಮಾಸ್ಕ್ ತಯಾರಿಸಿದರೆ ತ್ವಚೆಯ ಹೊಳಪನ್ನು ಹೆಚ್ಚಿಸಬಹುದು.