ಬ್ಲ್ಯಾಕ್ ಹೆಡ್ಸ್ ನಿವಾರಣೆಗೆ ಸರಳ ಉಪಾಯಗಳು

ಬೆಂಗಳೂರು, ಬುಧವಾರ, 6 ಜೂನ್ 2018 (17:55 IST)

ಮುಖವನ್ನು ಸ್ಕ್ರಬ್‌ ಮಾಡುವುದು ಮಹಿಳೆಯರಿಗೆ ಎಷ್ಟು ಅಗತ್ಯವೋ ಅಷ್ಟೇ ಅಗತ್ಯ ಪುರುಷರಿಗೂ ಇದೆ. ಸತ್ತ ಚರ್ಮ ಹಾಗೂ ಅಧಿಕ ಎಣ್ಣೆಯ ಅಂಶ ಮೂಗು, ಗಲ್ಲ ಹಾಗೂ ಹಣೆಯ ಚರ್ಮದ ಮೇಲೆ ಸಂಗ್ರಹವಾಗುವುದರಿಂದ ಬ್ಲ್ಯಾಕ್ ಹೆಡ್ಸ್ ಉಂಟಾಗುತ್ತದೆ.
ಮನೆಯಲ್ಲಿಯೇ ಸುಲಭವಾಗಿ ಬ್ಲ್ಯಾಕ್‌ಹೆಡ್ಸ್‌ ನಿವಾರಣೆಗೆ ಸ್ಕ್ರಬ್‌ ತಯಾರಿಸಬಹುದು
 
1. ಅಡುಗೆ ಸೋಡಾ
- 2-3 ಚಮಚ ಅಡುಗೆ ಸೋಡಾವನ್ನು  1 ಚಮಚ ನೀರಿನಲ್ಲಿ ಬೆರೆಸಿ. ಅದನ್ನು ಬ್ಲ್ಯಾಕ್ ಹೆಡ್ಸ್ ಇರುವಲ್ಲಿ ಹಚ್ಚಿ 5 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಬಿಸಿ ನೀರಿನಲ್ಲಿ ತೊಳೆಯಿರಿ. ಹೀಗೆ 1 ವಾರ ಮಾಡಿದರೆ ಬ್ಲ್ಯಾಕ್ ಹೆಡ್ಸ್ ನಿವಾರಣೆಗೆಯಾಗುತ್ತದೆ.
 
2. ನಿಂಬೆ ರಸ
- ನಿಂಬೆ ಹಣ್ಣಿನಿಂದ ಮುಖವನ್ನು ಸ್ಕ್ರಬ್ ಮಾಡಿ.
- 2 ಚಮಚ ನಿಂಬೆಯ ರಸಕ್ಕೆ 1/4 ಚಮಚ ಉಪ್ಪು ಹಾಕಿ ಬೆರೆಸಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ ಮುಖವನ್ನು ತೊಳೆಯಿರಿ.
 
3. ಜೇನು ತುಪ್ಪ
- 1 ಚಮಚ ಜೇನು ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ, ಈ ಬೆಚ್ಚಗಿನ ಜೇನು ತುಪ್ಪವನ್ನು ಬ್ಲ್ಯಾಕ್‌ಹೆಡ್ಸ್‌ ಇರುವಲ್ಲಿ ಹಚ್ಚಿ, 10 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಬಿಸಿ ನೀರಿನಲ್ಲಿ ಒದ್ದೆ ಮಾಡಿದ ಬಟ್ಟೆಯಿಂದ ಒರೆಸಿ.
 
4. ಚಕ್ಕೆ
- 1 ಚಮಚ ಚಕ್ಕೆ ಪುಡಿಗೆ 2 ಚಮಚ ಜೇನು ತುಪ್ಪವನ್ನು ಬೆರೆಸಿ, ಬ್ಲ್ಯಾಕ್‌ಹೆಡ್ಸ್‌ ಇರುವಲ್ಲಿ ಹಚ್ಚಿ, 10 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಮುಖವನ್ನು ತೊಳೆಯಿರಿ.
 
5. ಟೊಮೇಟೊ
- ಟೊಮೇಟೊ ರಸವನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ನಂತರ ನೀರಿನಲ್ಲಿ ಮುಖ ತೊಳೆಯಿರಿ.
 
6. ಮೊಟ್ಟೆಯ ಬಿಳಿಭಾಗ
- ಮೊಟ್ಟೆಯ ಬಿಳಿಭಾಗಕ್ಕೆ ಸ್ವಲ್ಪ ಜೇನು ತುಪ್ಪ ಮತ್ತು ನಿಂಬೆರಸವನ್ನು ಬೆರೆಸಿ, ಮುಖಕ್ಕೆ ಹಚ್ಚಿ ಅದು ಒಣಗಿದ ನಂತರ ಸ್ವಲ್ಪ ನೀರನ್ನು ಮುಖಕ್ಕೆ ಹಾಕಿ ಸ್ಕ್ರಬ್ ಮಾಡಿ , ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
 
7. ಟೂತ್‌ಪೇಸ್ಟ್
- ಟೂತ್‌ಪೇಸ್ಟ್ ಅನ್ನು ಬ್ಲ್ಯಾಕ್‌ಹೆಡ್ಸ್‌ ಇರುವ ಸ್ಥಳಕ್ಕೆ ಹಚ್ಚಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.ಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ಬಿಳುಪಾದ ಹಲ್ಲು ನಿಮ್ಮದಾಗಬೇಕೆ…?

ಬೆಂಗಳೂರು: ಬಿಳುಪಾದ ಹಲ್ಲು ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಹಲ್ಲು ಹಳದಿಯಾಗಿದ್ದರೆ ನಗುವುದಕ್ಕೂ ...

news

ನಿಮ್ಮ ಮುಖವು ಹೊಳೆಯುವಂತೆ ಮಾಡಲು ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು: ಇಂದಿನ ಜೀವನಶೈಲಿ, ನಾವು ಸೇವಿಸುವ ಆಹಾರ ಇವುಗಳೆಲ್ಲವೂ ನಮ್ಮ ಆರೋಗ್ಯದ ಮೇಲೆ ಪರಿಣಾಮ ...

news

ಬೇಸಿಗೆಯಲ್ಲಿ ಮುಖ ನಳನಳಿಸಬೇಕೆ….? ಹೀಗೆ ಮಾಡಿ!

ಬೆಂಗಳೂರು: ಬೇಸಿಗೆಯಲ್ಲಿ ಮಹಿಳೆಯರನ್ನು ಕಾಡುವ ಅತ್ಯಂತ ದೊಡ್ಡ ಸಮಸ್ಯೆಯೆಂದರೆ ಸ್ಕಿನ್ ಟ್ಯಾನ್‌. ಎಷ್ಟೇ ...

news

ತೆಂಗಿನೆಣ್ಣೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ..?

ಬೆಂಗಳೂರು : ಮುಖ ಹಾಗೂ ಕೂದಲ ಸೌಂದರ್ಯಕ್ಕೆ ನಾವು ಎಷ್ಟೆಲ್ಲಾ ಖರ್ಚು ಮಾಡುತ್ತೇವೆ. ಸಾಕಷ್ಟು ರಾಸಯನಿಕ ...

Widgets Magazine