ಕೂದಲಿಗೆ ಹೀಗೆ ಶಾಂಪೂ ಮಾಡಿದರೆ ಕೂದಲು ಆರೋಗ್ಯಕರವಾಗಿರುತ್ತದೆಯಂತೆ!

ಬೆಂಗಳೂರು, ಶುಕ್ರವಾರ, 13 ಏಪ್ರಿಲ್ 2018 (07:44 IST)

ಬೆಂಗಳೂರು : ಕೂದಲಿಗೆ ಶಾಂಪು ಮಾಡುವಾಗ ಸರಿಯಾದ ರೀತಿಯಲ್ಲಿ ಮಾಡಿದರೆ ಕೂದಲು ಆರೋಗ್ಯಕರವಾಗಿರುತ್ತದೆ. ಯಾವುದೇ ಸಮಸ್ಯೆಗಳು ಕಂಡುಬರುವುದಿಲ್ಲ. ಆದರೆ ಕೆಲವರು ಕೂದಲಿಗೆ ಶಾಂಪು ಹೇಗೆ ಮಾಡಬೇಕೆಂಬುದನ್ನು ತಿಳಿದಿರುವುದಿಲ್ಲ. ಅಂತವರು ಹೆಚ್ಚಾಗಿ ಕೂದಲಿಗೆ ಸಂಬಂದಪಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಅವರು ಮೊದಲು ಶಾಂಪು ಮಾಡುವಾಗ  ಅನುಸರಿಸಬೇಕಾದ ಕೆಲವು ಹಂತಗಳ ಬಗ್ಗೆ ತಿಳಿದುಕೊಳ್ಳಿ.


*ಶಾಂಪೂ ಮಾಡುವ ಮೊದಲು ದೊಡ್ಡ ಹಲ್ಲಿನ ಬಾಚಣಿಗೆ ಬಳಸಿ ನಿಮ್ಮ ಕೂದಲಿನ ಸಿಕ್ಕು ಬಿಡಿಸುವುದನ್ನು ಮರೆಯದಿರಿ.


*ಈಗ ಉಗುರುಬೆಚ್ಚಗಿನ ನೀರು ಬಳಸಿ ನಿಮ್ಮ ಕೂದಲನ್ನು ಒದ್ದೆ ಮಾಡಿ. ಸರಿಯಾದ ಪ್ರಮಾಣದ ಶಾಂಪೂ ತೆಗೆದುಕೊಂಡು, ನಿಧಾನವಾಗಿ ಕೂದಲಿಗೆ ಹಚ್ಚಿ. ಕೂದಲಿನ ಉದ್ದಕ್ಕೂ ಹರಡುವಂತೆ ಉಜ್ಜಿ ಮತ್ತು ನೆತ್ತಿಯ ಮೇಲೆ ಹೆಚ್ಚಿನ ಗಮನ ಕೊಟ್ಟು ಕೊಳೆ ಹೋಗುವಂತೆ ನೋಡಿಕೊಳ್ಳಿ
.
*ತಣ್ಣೀರಿನಲ್ಲಿ ಕೂದಲನ್ನು ತೊಳೆಯಿರಿ ಮತ್ತು ಕೂದಲನ್ನು ಕೆಳಗಿನ ದಿಕ್ಕಿಗೆ ಸವರಿ ತೊಳೆಯಿರಿ. ಇದರಿಂದ ಕೂದಲು ಸಿಕ್ಕಾಗುವುದನ್ನು ತಡೆಯಬಹುದು.

*ನಂತರ ಉತ್ತಮ ಕಂಡಿಷನರ್ ಹಚ್ಚಿ, ಕೇವಲ ಕೂದಲ ಬುಡದಲ್ಲಿ ಮಾತ್ರ.

*ಸುಮಾರು ಐದು ನಿಮಿಷಗಳ ಕಾಲ ಕಂಡಿಷನರ್ ಅನ್ನು ಹಾಗೇ ಬಿಡಿ. ಇದು ತಲೆಯ ಹೊರಚರ್ಮ ಬಲಪಡಿಸುವಲ್ಲಿ ನೆರವಾಗುತ್ತದೆ ಮತ್ತು ಲಿಂಪ್ ಆಗದಂತೆ ತಡೆಯುತ್ತದೆ.
*ನಂತರ ಕೂದಲನ್ನು ಸರಿಯಾಗಿ ತೊಳೆಯಿರಿ ಮತ್ತು ಬಟ್ಟೆಯಿಂದ ಒರೆಸಿ. ಒದ್ದೆ ಕೂದಲು ಸೂಕ್ಷ್ಮವಾಗಿದ್ದು ಅದು ಬೇಗ ತುಂಡಾಗುವುದರಿಂದ ಜಾಗರೂಕರಾಗಿರಿ.

* ನಿಮ್ಮ ಕೂದಲನ್ನು ಯಾವಾಗಲೂ ಬ್ಲೋ ಡ್ರೈ ಮಾಡಬೇಡಿ. ಇದರಿಂದ ಕೇಶ ದುರ್ಬಲ ಮತ್ತು ಒರಟಾಗುತ್ತದೆ.

ಈ ಸುಲಭ ಹಂತಗಳನ್ನು ಅನುಸರಿಸಿ ಮತ್ತು ಒಂದು ವಾರಕ್ಕೆ ಮೂರು ಬಾರಿ ನಿಮ್ಮ ಕೂದಲನ್ನು   ಶಾಂಪುವಿನಿಂದ ತೊಳೆಯಿರಿ. ಶೀಘ್ರದಲ್ಲೇ ನಿಮ್ಮ ಕೂದಲು ತನ್ನ ಹೊಳಪು ಮತ್ತು ದಟ್ಟತೆಯನ್ನು ಮರಳಿ ಪಡೆಯಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ನಿಮ್ಮ ಸೊಂಟದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಬೇಕಾ. ಹಾಗಾದ್ರೆ ಇಲ್ಲಿದೆ ನೋಡಿ ಸುಲಭ ವಿಧಾನ !

ಬೆಂಗಳೂರು : ಹೆಚ್ಚಿನವರಿಗೆ ಸೊಂಟದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಆದರೆ ಇದು ಅನಾರೋಗ್ಯದ ...

news

ಬೇಸಿಗೆಯಲ್ಲೂ ಕೂದಲು ದಪ್ಪವಾಗಿ, ಮೃದುವಾಗಿ ಹೊಳೆಯುವಂತೆ ಆಗಬೇಕಾ…? ಇಲ್ಲಿದೆ ನೋಡಿ ಸೂಪರ್ ಟಿಪ್ಸ್

ಬೆಂಗಳೂರು : ಚಳಿಗಾಲದ ನಂತರ, ಹವಾಮಾನವು ಬದಲಾಗುತ್ತದೆ. ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕೂದಲಿನ ಸಮಸ್ಯೆ ...

news

ಸಣ್ಣ ವಯಸ್ಸಿನಲ್ಲೇ ಮುಖದಲ್ಲಿ ಸುಕ್ಕು ಅಥವಾ ನೆರಿಗೆಗಳು ಮೂಡದಂತೆ ತಡೆಯಲು ಈ ಸೊಪ್ಪನ್ನು ಹೆಚ್ಚಾಗಿ ಬಳಸಿ

ಬೆಂಗಳೂರು : ನಿಮ್ಮ ಮುಖದಲ್ಲಿ ಸುಕ್ಕು ಅಥವಾ ನರಿಗೆಗಳು ಸಣ್ಣ ವಯಸ್ಸಿನಲ್ಲೇ ಕಾಣಿಸುತ್ತಿರುವುದಕ್ಕೆ ಮುಖ್ಯ ...

news

ಮುಖದಲ್ಲಿನ ಮೊಡವೆಯ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ!

ಬೆಂಗಳೂರು : ಹಾಗಲಕಾಯಿ ಹಲವಾರು ಪೋಷಕ ತತ್ವಗಳಿಂದ ತುಂಬಿದೆ. ಇದರಿಂದ ಹಲವಾರು ರೀತಿಯ ವಿಟಾಮಿನ್ಸ್‌‌ ಮತ್ತು ...

Widgets Magazine