ಬೆಂಗಳೂರು : ಸೊಂಪಾದ ಮತ್ತು ನೀಳ ಕೂದಲನ್ನು ಹೊಂದುವುದು ಪ್ರತಿ ಮಹಿಳೆಯ ಕನಸಾಗಿದೆ. ಆದರೆ ಈ ಕೂದಲು ಬಿಡಿಬಿಡಿಯಾಗಿ, ಸಿಕ್ಕಿಲ್ಲದೇ ಎಣ್ಣೆಜಿಡ್ಡಿಲ್ಲದೇ ಇರುವಂತೆ ನೋಡಿಕೊಳ್ಳುವುದೇ ದೊಡ್ಡ ಸಮಸ್ಯೆ. ಈ ಜಿಡ್ಡು ಅನಾರೋಗ್ಯಕರವಂತೂ ಅಲ್ಲ, ಆದರೆ ಕೂದಲ ಆರೈಕೆಯನ್ನು ಸರಿಯಾಗಿ ಇಟ್ಟುಕೊಳ್ಳದೇ ಇದ್ದರೆ ಈ ಎಣ್ಣೆಜಿಡ್ಡಿಗೆ ಅಂಟಿಕೊಳ್ಳುವ ಗಾಳಿಯ ಕೊಳೆ, ಧೂಳು ಹಾಗೂ ಇತರ ಕಲ್ಮಶಗಳು ಕೂದಲ ಜಿಡ್ಡುತನವನ್ನು ಇನ್ನಷ್ಟು ಹೆಚ್ಚಿಸಿ ಸೌಂದರ್ಯದ ಜೊತೆಗೇ ಕೂದಲ ಆರೋಗ್ಯವನ್ನೂ ಕುಂದಿಸುತ್ತವೆ. ಇಂತಹ ಜಿಡ್ಡನ್ನು